ಬೆಂಗಳೂರು: ಡಿ.ಜೆ.ಹಳ್ಳಿ ಕೆ.ಜೆ.ಹಳ್ಳಿ ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಕಡೆಗೂ ಶಿಸ್ತು ಕ್ರಮ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.
Advertisement
ಅಖಂಡ ಮನೆಗೆ ಬೆಂಕಿ ಬಿದ್ದು 4 ತಿಂಗಳಾದ ಬಳಿಕ ಸಂಪತ್ ರಾಜ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಕೆಪಿಸಿಸಿಯ ಶಿಸ್ತುಪಾಲನ ಸಮಿತಿಗೆ ಶಿಫಾರಸ್ಸು ಮಾಡಿದ್ದಾರೆ. ರೆಹಮಾನ್ ಖಾನ್ ನೇತೃತ್ವದ ಶಿಸ್ತುಪಾಲನಾ ಸಮಿತಿ ನೀಡುವ ವರದಿ ಆಧಾರದ ಮೇಲೆ ಸಂಪತ್ ರಾಜ್ ಭವಿಷ್ಯ ತೀರ್ಮಾನ ಆಗಲಿದೆ.
Advertisement
Advertisement
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಎಷ್ಟು ಬಾರಿ ಮಾಡಿದ್ರೂ ಡಿಕೆ ಶಿವಕುಮಾರ್ ತಮ್ಮ ಶಿಷ್ಯನ ವಿರುದ್ಧ ಕ್ರಮಕ್ಕೆ ಮುಂದಾಗಿರಲಿಲ್ಲ. ಈ ಬಗ್ಗೆ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕೊನೆಗೆ ಇದು ಆಗೋ ಕೆಲಸ ಅಂತಾ ಹೈಕಮಾಂಡ್ಗೆ ದೂರು ಕೊಡಲು ಅಖಂಡ ಶ್ರೀನಿವಾಸಮೂರ್ತಿ ತಯಾರಿ ನಡೆಸಿದ್ದರು. ಇದು ಗೊತ್ತಾಗುತ್ತಲೇ ಡಿಕೆ ಶಿವಕುಮಾರ್, ಸಂಪತ್ ರಾಜ್ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.