ಬಿಗ್ಬಾಸ್ಮನೆಯಲ್ಲಿ ಕನ್ನಡ ಭಾಷೆಯನ್ನು ಬಿಟ್ಟು ಬೇರೆ ಭಾಷೆಗಳನ್ನು ಬಳಸುವಂತಿಲ್ಲ. ಆದರೆ ಶುಭಾ ಬಳಸಿರುವ ಭಾಷೆ ಯಾವುದು ಎಂದು ಅರ್ಥವಾಗದೆ ಬಿಗ್ಬಾಸ್ ನಾವು ಆಡುವ ನುಡಿಯೇ ಕನ್ನಡನುಡಿ ಎಂದು ಸಾಂಗ್ ಹಾಕಿದ್ದಾರೆ.
Advertisement
ಬಿಗ್ಬಾಸ್ ಮನೆಯಲ್ಲಿ ಶುಭಾ ಆಗಾಗ ಸಣ್ಣ ಮಕ್ಕಳಂತೆ ಆಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಬಿಗ್ಬಾಸ್ ಬಳಿ ಹಟ ಮಾಡುವುದು ಸಣ್ಣ ಮಕ್ಕಳಂತೆ ಓಡಾಡುತ್ತಾ ಕಿತಾಪತಿಗಳನ್ನು ಮಾಡುತ್ತಾ ಇರುವ ಶುಭಾ ಇದೀಗ ಅರ್ಥವಾಗದೆ ಇರುವಯಾವುದೋ ಭಾಷೆಯಲ್ಲಿ ಮಾತನಾಡಿ ಬಿಗ್ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿದ್ದೂ ಅಲ್ಲದೇ ಬಿಗ್ಬಾಸ್ಸ್ಗೆ ಅವಾಜ್ ಹಾಕಿದ್ದಾರೆ. ಬಿಗ್ಬಾಸ್ ನಾನು ಮಾತನಾಡಿರುವುದು ಯಾವ್ ಭಾಷೆ ಹೇಳಿ ಎಂದು ಜೋರಾಗಿ ಅವಾಜ್ ಹಾಕಿದ್ದಾರೆ. ಬಿಗ್ಬಾಸ್ ಏನು ಮಾತನಾಡೆ ಸುಮ್ಮನಾಗಿದ್ದಾರೆ.
Advertisement
Advertisement
ಬಿಗ್ಬಾಸ್ ಮೈಕ್ ಸರಿ ಹಾಕಿಕೊಳ್ಳಿ ಎಂದು ನನ್ನ ಕರೆದು ಬೈದರು ಎಂದು ಮಂಜು ಶುಭಾ ಬಳಿ ಹೇಳಿದ್ದಾರೆ. ಆಗ ಶುಭಾ ಮುದ್ದಾಗಿ ಆಗಲ್ಲ. ಮಾಡಲ್ಲ ಬನ್ನಿ ನೀವೆ ಎಂದು ಹೇಳಬೇಕಿತ್ತು ಬಿಗ್ಬಾಸ್ಗೆ ಎಂದು ಅವಾಜ್ ಹಾಕಿದ್ದಾರೆ. ಆಗ ಬಿಗ್ಬಾಸ್ ಶುಭಾ ಮೇಲೆ ಕೋಪಗೊಂಡು ಶುಭಾ ನಿಮ್ಮ ಮೈಕ್ ಸರಿ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಆಗ ಶುಭಾ ಮಾಡಲ್ಲ ಬಿಗ್ಬಾಸ್ ಏನ್ ಇವಾಗ, ಬನ್ನಿ ಎಂದು ಬಿಗ್ಬಾಸ್ಗೆ ಅವಾಜ್ ಹಾಕಿದ್ದಾರೆ.
Advertisement
ಶುಭಾ ಮಕ್ಕಳಂತೆ ಮಾಡುತ್ತಾ ಬಿಗ್ಬಾಸ್ಗೆ ಜೋರು ಮಾಡುತ್ತಿದ್ದಾರೆ. ಬಿಗ್ಬಾಸ್ ಕೂಡ ಕೆಲವೊಮ್ಮೆ ಶುಭಾಗೆ ಸೂಕ್ಷ್ಮವಾಗಿ ಹೇಳುತ್ತಾರೆ. ಆದರೆ ಶುಭಾ ಮಾತ್ರ ಇನ್ನು ಸಣ್ಣಮಕ್ಕಳಂತೆ ಆಡುತ್ತಾ ಬಿಗ್ಬಾಸ್ಗೆ ಜೋರು ಮಾಡುತ್ತಿದ್ದಾರೆ.