ಥಿಂಫು: ವಿಶ್ವದ ವಿವಿಧ ರಾಷ್ಟ್ರಗಳಿಗೆ ಭಾರತದಿಂದ ಈಗಾಗಲೇ ಬೃಹತ್ ಪ್ರಮಾಣದಲ್ಲಿ ಕೊರೊನಾ ಲಸಿಕೆಯನ್ನು ಕಳುಹಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಆ ದೇಶದ ಪ್ರತಿನಿಧಿಗಳು, ಸೆಲೆಬ್ರಿಟಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ಅದೇ ರೀತಿ ಭೂತಾನ್ಗೂ ಕೊರೊನಾ ಲಸಿಕೆ ಕಳಹಿಸಲಾಗಿದ್ದು, ಅಲ್ಲಿನ ಪುಟ್ಟ ಕಲಾವಿದೆ ವೀಡಿಯೋ ಸಂದೇಶದ ಮೂಲಕ ಧನ್ಯವಾದ ಹೇಳಿದ್ದಾಳೆ.
ಭೂತಾನಲ್ಲಿನ ಭಾರತದ ರಾಯಭಾರಿ ರುಚಿರಾ ಕಾಂಬೋಜ್ ಈ ವೀಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಸ್ಥಳೀಯ ಬಾಲ ಪ್ರತಿಭೆ ಖೆನ್ರಾಬ್ ಯೀಡ್ಝಿನ್ ಸೈಲ್ಡೆನ್ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ. ಭಾರತ ಅಗತ್ಯ ವ್ಯಾಕ್ಸಿನ್ ಡೋಸಸ್ ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದಗಳು ಎಂದು ಭೂತಾನ್ನ ಪುಟ್ಟ ಕಲಾವಿದೆ ತುಂಬಾ ಕ್ಯೂಟ್ ಆಗಿ ವಿಶ್ ಮಾಡಿದ್ದಾಳೆ.
Advertisement
Khenrab! Your ‘thank you’ touches our hearts! #VaccineMaitri #indiabhutanfriensdhip. pic.twitter.com/2JOnCHVQ5a
— Ruchira Kamboj (@RuchiraKamboj) March 26, 2021
Advertisement
ಆರಂಭದಲ್ಲಿ ತನ್ನನ್ನು ಪರಿಚಯ ಮಾಡಿಕೊಂಡು ಮಾತು ಆರಂಭಿಸುವ ಬಾಲಕಿ, ದೇಶದಲ್ಲಿ ವ್ಯಾಕ್ಸಿನ್ ಡ್ರೈವ್ ಆರಂಭವಾಗಲು ಅಗತ್ಯವಿರುವ ಲಸಿಕೆ ಡೋಸ್ ಕಳುಹಿಸುವ ಮೂಲಕ ತುಂಬಾ ದಯೆ ತೋರಿಸಿದ್ದಕ್ಕೆ ಭಾರತಕ್ಕೆ ಧನ್ಯವಾದ ಎಂದು ಹೇಳಿದ್ದಾಳೆ. ವೀಡಿಯೋದ ಕೊನೆಯಲ್ಲಿ ತನ್ನ ಮುಗ್ದತೆ ಮೂಲಕವೇ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿ ಶುಕ್ರಿಯಾ ಎಂದು ಹೇಳಿ ನೆಟ್ಟಿಗರ ಮನಸು ಗೆದ್ದಿದ್ದಾಳೆ.
Advertisement
ಭೂತಾನ್ನಲ್ಲಿ ಭಾರತದ ರಾಯಭಾರಿಯಾಗಿರುವ ರುಚಿರಾ ಅವರು ಈ ವೀಡಿಯೋವನ್ನು ಟ್ವೀಟ್ ಮಾಡಿ ಸಾಲುಗಳನ್ನು ಬರೆದಿದ್ದು, ಖೆನ್ರಾಬ್ ನಿಮ್ಮ ಧನ್ಯವಾದ ನಮ್ಮ ಹೃದಯ ಸ್ಪರ್ಶಿಸಿದೆ ಎಂದು ಬರೆದಿದ್ದಾರೆ. ಅಲ್ಲದೆ ವ್ಯಾಕ್ಸಿನ್ ಮೈತ್ರಿ, ಇಂಡಿಯಾ ಭೂತಾನ್ ಫ್ರಂಡ್ಶಿಪ್ ಹ್ಯಾಶ್ ಟ್ಯಾಗ್ಗಳನ್ನು ಬಳಸಿದ್ದಾರೆ.
Advertisement
ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ 13,400 ವ್ಯೂವ್ಸ್ ಪಡೆದಿದೆ. 290 ಜನ ರೀಟ್ವೀಟ್ ಮಾಡಿದ್ದಾರೆ. ಅಲ್ಲದೆ 1,354 ಲೈಕ್ಸ್ ಪಡೆದಿದೆ. ಆಕೆಯ ಕ್ಯೂಟ್ನೆಸ್ ಬಗ್ಗೆ ಜಾಲತಾಣದಲ್ಲಿ ಸಖತ್ ಚರ್ಚೆ ನಡೆಯುತ್ತಿದೆ. ಸಚ್ ಎ ಲವ್ಲಿ ಥ್ಯಾಂಕ್ಯೂ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದು, ಮತ್ತೊಬ್ಬರು ತಮಾಷೆಯಾಗಿ ನಾವು ಅವಳನ್ನು ಉಳಿಸಿಕೊಳ್ಳಬಹುದೇ ಎಂದು ಕೇಳಿದ್ದಾರೆ.
ಮಾಚ್ 22ರಂದು 400 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಭೂತಾನ್ಗೆ ಕಳುಹಿಸಲಾಗಿದ್ದು, ಲಸಿಕೆಯನ್ನು ಕಾಂಬೋಜ್ ಸ್ವೀಕರಿಸಿದ್ದು, ಪರೋ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಸಚಿವ ತಾಂಡಿ ದೋರ್ಜಿ ಅವರಿಗೆ ಹಸ್ತಾಂತರಿಸಲಾಯಿತು. ವ್ಯಾಕ್ಸಿನ್ ಡ್ರೈವ್ ಆರಂಭಿಸಲು ಸಾಧ್ಯವಾಗಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಅವರು ಧನ್ಯವಾದ ಅರ್ಪಿಸಿದ್ದಾರೆ. ಮಾರ್ಚ್ 27ರಿಂದ ವ್ಯಾಕ್ಸಿನೇಶನ್ ಡ್ರೈವ್ ಆರಂಭವಾಗಿದೆ ಎಂದು ಸಹ ತಿಳಿಸಿದ್ದಾರೆ.