– ಮೂರು ದಿನಗಳಿಂದ ಕಾಯುತ್ತಿರುವ ಸೋಂಕಿತ
– ಈತನಿಂದ ಮಗು, ಪತ್ನಿಗೂ ಸೋಂಕು
– ತೀವ್ರ ಜ್ವರದಿಂದ ಬಳಲುತ್ತಿರುವ ಮಗು, ಕಣ್ಣೀರು ಹಾಕುತ್ತಿರುವ ಸೋಂಕಿತ
ಬೆಂಗಳೂರು: ಬಿಬಿಎಂಪಿ ಮತ್ತು ಕೊರೊನಾ ಟೆಸ್ಟ್ ಲ್ಯಾಬ್ನಿಂದಾಗಿರುವ ಎಡವಟ್ಟಿಗೆ ಸೋಂಕಿತ ಪರದಾಡುವಂತಾಗಿದ್ದು, ಶುಕ್ರವಾರವೇ ಪಾಸಿಟಿವ್ ಬಂದರೂ ಬಿಬಿಎಂಪಿ ಇನ್ನೂ ಆಸ್ಪತ್ರೆ ವ್ಯವಸ್ಥೆ ಮಾಡಿಲ್ಲ. ಈತನಿಂದಾಗಿ ಮಗು, ಪತ್ನಿಗೂ ಸೋಂಕು ತಗುಲಿದ್ದು, ಮಗು ವಿಪರೀತ ಜ್ವರದಿಂದ ಬಳಲುತ್ತಿದೆ. ಹೀಗಾಗಿ ಸಂಕಿತ ಭಯಭೀತನಾಗಿದ್ದಾನೆ.
ನಗರದ ನಾಗರಭಾವಿಯ ಸೋಂಕಿತನ ಸ್ಥಿತಿ ಹೇಳತೀರದಾಗಿದ್ದು, ಲ್ಯಾಬ್ ರಿಪೋರ್ಟ್ ಕೊಡದೆ ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಬಿಬಿಎಂಪಿ ಹೇಳುತ್ತಿದೆ. ಇನ್ನೊಂದೆಡೆ ಲ್ಯಾಬ್ಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಶನಿವಾರ ಬೆಳಗ್ಗೆಯಿಂದ ಆಸ್ಪತ್ರೆಗೆ ಸೇರಲು ಸೋಂಕಿತ ಪರದಾಡುತ್ತಿದ್ದಾನೆ. ಅತ್ತ ಆಸ್ಪತ್ರೆಗೆ ಹೋಗಲು ಆಗದೆ, ಲ್ಯಾಬ್ ರಿಪೋರ್ಟ್ ಸಿಗದೆ ಸೋಂಕಿತ ಸಂಕಷ್ಟಕ್ಕೆ ಸಿಲುಕಿದ್ದಾನೆ.
Advertisement
Advertisement
ಸದ್ಯ ಸೋಂಕಿತ ನಾಗರಬಾವಿಯ ಮನೆಯಲ್ಲಿಯೇ ಇದ್ದು, ಸೋಂಕಿತನಿಂದ ಆತನ ಮಗು ಹಾಗೂ ಪತ್ನಿಗೂ ಸೋಂಕು ತಗುಲಿದೆ. ಮಗು ಮತ್ತು ಹೆಂಡತಿಗೆ ಜ್ವರ, ಪರಿಸ್ಥಿತಿ ಕೈಮೀರಿದ್ದಕ್ಕೆ ಸೋಂಕಿತ ಕಣ್ಣೀರು ಹಾಕುತ್ತಿದ್ದಾನೆ. ಆದರೆ ಬಿಬಿಎಂಪಿಯವರು ಮಾತ್ರ ಕಾಲಹರಣ ಮಾಡುತ್ತಿದ್ದು, ಇನ್ನೂ ಆಸ್ಪತ್ರೆಗೆ ಸ್ಥಳಾಂತರ ಮಾಡಿಲ್ಲ.
Advertisement
ಶುಕ್ರವಾರ ಬೆಳಗ್ಗೆ ಪಾಸಿಟಿವ್ ಎಂದು ಗೊತ್ತಾಗಿದೆ. ಶುಕ್ರವಾರ ಬೆಳಗ್ಗೆಯಿಂದಲೂ ಸೋಂಕಿತ ಆಸ್ಪತ್ರೆಗೆ ಹೋಗಲು ಕಾಯುತ್ತಿದ್ದಾನೆ. ಜಂಟಿ ಆಯುಕ್ತರನ್ನು ಕೇಳಿದರೂ ನಂಬರ್ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈಗ ಮಗುವಿಗೂ ಸೋಂಕು ಕಾಣಿಸಿಕೊಂಡಿದ್ದರಿಂದ ತೀವ್ರ ಜ್ವರದಿಂದ ಬಳಲುತ್ತಿದೆಯಂತೆ.
Advertisement
ಬಿಬಿಎಂಪಿಯರನ್ನು ಕಾದು ಬೇಸತ್ತ ಸೋಂಕಿತ, ಬ್ಯಾಗ್ನಲ್ಲಿ ಬಟ್ಟೆ ತುಂಬಿಕೊಂಡು ಕುಟುಂಬ ಸಮೇತ ಖಾಸಗಿ ಆಸ್ಪತ್ರೆಗೆ ಸೇರಲು ಸೋಂಕಿತ ಹೊರಟಿದ್ದಾನೆ. ಬಿಬಿಎಂಪಿಯವರನ್ನು ಕಾದರೆ ನಾನು ಸತ್ತು ಹೋಗುತ್ತೇನೆ ಎಂದು ಖಾಸಗಿ ಆಸ್ಪತ್ರೆಗೆ ಹೊರಟಿದ್ದಾನೆ.