– ಸಿದ್ದರಾಮಯ್ಯ ‘ಹಿಂದ’ಕ್ಕೆ ಬೆಂಬಲ ಸೂಚನೆ
ಕೋಲಾರ: ನಾನು ಕಾಂಗ್ರೆಸ್ ಸೇರ್ಪಡೆ ಕುರಿತು ರಾಜ್ಯ ಮುಖಂಡರ ಜೊತೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಆಗಲಿದ್ದೇನೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ತಿಳಿಸಿದರು.
ಕೋಲಾರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಮುಖಂಡರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಸದ್ಯದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಅದುವರೆಗೂ ನಾನು ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡೊಲ್ಲ ಎಂದು ಹೇಳಿದ್ರು.
Advertisement
Advertisement
ನಾನು ಮತ್ತೆ ಎಂಎಲ್ಎ ಆಗಬೇಕು, 10 ವರ್ಷ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ನಲ್ಲಿಯೂ ಇರಬೇಕು ಎಂಬ ಆಸೆ ಇದೆ. ಸಿದ್ದರಾಮಯ್ಯನವರು ಹೋಗುವ ದಾರಿಯಲ್ಲಿ ನಾನು ಹೋಗುತ್ತೇನೆ. ಅವರು ಎಸ್.ಟಿ ಮೀಸಲಾತಿ ಹೋರಾಟಕ್ಕೆ ಹೋಗಿಲ್ಲ. ಅದಕ್ಕೆ ನಾನೂ ಕೂಡ ಹೋಗಿಲ್ಲ. ಅಹಿಂದ ಸಮಾವೇಶ ಮಾಡೋದಾದ್ರೆ ಮೊದಲಿಗೆ ಕೋಲಾರದಲ್ಲಿಯೇ ನಾನು ಸಮಾವೇಶ ಮಾಡುತ್ತೇನೆ. 2 ರಿಂದ 3 ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ ಮಾಡುವೆ ಎಂದರು.
Advertisement
ಇದೆ ವೇಳೆ ಕಾಂಗ್ರೆಸ್ ಪಕ್ಷವೇ ಯಾಕೆ ಎಂಬ ಬಿಜೆಪಿಗೆ ಸೇರಬಹುದಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನನ್ನ ಹುಟ್ಟಿನಿಂದಲೂ ಹಾಗೆ ಬಂದಿಲ್ಲ ಎಂದು ಹೇಳಿದ್ರು.
Advertisement
ಇದೇ ವೇಳೆ ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ 18 ಪಂಚಾಯತ್ಗಳಲ್ಲಿ ನಮ್ಮ ಬಣ 12 ಪಂಚಾಯ್ತಿ ವಶಪಡಿಸಿಕೊಂಡಿದ್ದು, ಗೆದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಇದೇ 21 ರಂದು ಕೋಲಾರದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದೇನೆ. ಕಾರ್ಯಕ್ರಮಕ್ಕೆ 5 ರಿಂದ 10 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.