ಮುಂಬೈ: ಶೀಘ್ರದಲ್ಲೇ ಬಿಜೆಪಿಯ ಕೆಲ ನಾಯಕರು ಎನ್ಸಿಪಿ ಸೇರ್ಪಡೆಯಾಗಲಿದ್ದಾರೆ ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಬಾಂಬ್ ಸಿಡಿಸಿದ್ದಾರೆ. ಕೆಲವೇ ದಿನಗಳಲ್ಲಿ ಬಿಜೆಪಿ ಮನೆಯಿಂದ ಹೊರ ಬರುವವರು ಹೆಸರು ತಿಳಿಯಲಿದೆ ಎಂದಿದ್ದಾರೆ.
Advertisement
ಈ ಹಿಂದೆ ಬಿಜೆಪಿ ಸೇರ್ಪಡೆಯಾದ ಹಲವು ನಾಯಕರ ಯೋಚನಾ ಲಹರಿ ಬದಲಾಗಿದೆ. ಬಿಜೆಪಿ ಆಡಳಿತ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಎನ್ಸಿಪಿ ಸೇರುವ ಬಗ್ಗೆ ಚಿಂತನೆ ನಡೆಸುತ್ತಿದ್ದು, ಚರ್ಚೆಯೂ ನಡೆಯುತ್ತಿದೆ. ಪುಣೆ ಮತ್ತು ಪಿಂಪರಿ ಚಿಂಚಾವಾಡ ಕೆಲ ನಾಯಕರು ಪಕ್ಷ ಸೇರುವ ಬಗ್ಗೆ ಮಾತನಾಡಿದ್ದಾನೆ. ಶೀಘ್ರದಲ್ಲೇ ಅವರೆಲ್ಲರನ್ನೂ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
Advertisement
Advertisement
ಇದಕ್ಕೂ ಮೊದಲು ಸಚಿವ ಜಯಂತ್ ಪಾಟೀಲ್, ಬಿಜೆಪಿಯ 10ಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆಯಲಿದ್ದಾರೆ. ಆ ಎಲ್ಲ ಶಾಸಕರನ್ನ ಎನ್ಸಿಪಿ ಬರಮಾಡಿಕೊಳ್ಳುವ ಕುರಿತು ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದ್ದರು. ಕೆಲ ದಿನಗಳ ಹಿಂದೆ ಜನಸೂರಾಜ್ಯ ಪಕ್ಷದ ಮಾಜಿ ಶಾಸಕರೊಬ್ಬರು ಎನ್ಸಿಪಿ ಸೇರ್ಪಡೆಗೊಂಡಿದ್ದಾರೆ.