ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಮತ್ತೆ ನಟನೆಗೆ ಹಿಂದಿರುಗುವದಾಗಿ ಹೇಳಿದ್ದಾರೆ. ಇದಕ್ಕೆ ತಮ್ಮ ಪತಿ ಚಿರಂಜೀವಿ ಸರ್ಜಾ ಕಾರಣ ಎಂದಿದ್ದಾರೆ.
ನಟನೆ ನನ್ನ ಬದುಕಾಗಿದ್ದು, ಅದು ನನ್ನ ರಕ್ತದಲ್ಲಿ ಇದೆ. ಪತಿ ಚಿರಂಜೀವಿ ಸರ್ಜಾ, ಇಷ್ಟಪಡುವ ವಸ್ತು ಅಥವಾ ಕೆಲಸದಿಂದ ಎಂದೂ ಹಿಂದೆ ಸರಿಯಕೂಡದು ಅಂತ ಹೇಳುತ್ತಿದ್ದರು. ಹಾಗಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೇನೆ. ನನ್ನಿಂದ ಎಲ್ಲಿಯವರೆಗೂ ಸಾಧ್ಯವೂ ಅಲ್ಲಿಯವರೆಗೂ ಕಲಾ ವೃತ್ತಿಯಲ್ಲಿ ತೊಡಗಿಕೊಂಡಿರುತ್ತೇನೆ. ಶೀಘ್ರದಲ್ಲೇ ಖಂಡಿತವಾಗಿ ನಟನೆಗೆ ಮರಳುತ್ತೇನೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.
ಸದ್ಯ ಮೇಘನಾ ಸರ್ಜಾ ಮತ್ತು ಅವರ ಮಗನಿಗೂ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಮೇಘಾನ ಅವರ ತಾಯಿ ಪ್ರಮಿಳಾ ಜೋಷಾಯ್ ಮತ್ತು ತಂದೆ ಸುಂದರ್ ರಾಜ್ ಕೊರೊನಾ ಸೋಂಕು ತಗುಲಿತ್ತು. ಜೋಕುಮಾರಸ್ವಾಮಿ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಮೇಘನಾ ರಾಜ್ ಬಣ್ಣದ ಲೋಕ ಪ್ರವೇಶಿಸಿದ್ದರು.