– ಸಿಲಿಕಾನ್ ಸಿಟಿಗೆ ಒಟ್ಟು 15 ಬಸ್ಗಳ ಸಂಚಾರ
ಶಿವಮೊಗ್ಗ: ಲಾಕ್ಡೌನ್ನ ನಾಲ್ಕನೇ ಹಂತ ಆರಂಭವಾದ ಬೆನ್ನಲ್ಲೇ ರಾಜ್ಯದಲ್ಲಿ ನಿಗದಿತ ಬಸ್ ಸಂಚಾರವನ್ನು ಸರ್ಕಾರ ಆರಂಭಿಸಿದ್ದು, ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ಬಹುತೇಕ ಎಲ್ಲ ಬಸ್ಗಳ ಟಿಕೇಟ್ ಸೋಲ್ಡ್ ಔಟ್ ಆಗಿದೆ.
Advertisement
ಶಿವಮೊಗ್ಗದಿಂದ ಬೆಂಗಳೂರಿಗೆ ಹಲವರು ಸೀಟ್ ಕಾಯ್ದಿರಿಸಿ ಪ್ರಯಾಣಿಸುತ್ತಿದ್ದು, ಇನ್ನೂ ಹಲವರು ನೇರ ಟಿಕೆಟ್ ಪಡೆದು ಸಂಚರಿಸುತ್ತಿದ್ದಾರೆ. ಈಗಾಗಲೇ 6 ಬಸ್ಗಳು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿವೆ. ಮಧ್ಯಾಹ್ನ 1 ಗಂಟೆಯವರೆಗೆ ಇನ್ನೂ ಆರೇಳು ಬಸ್ಗಳು ಸಿಲಿಕಾನ್ ಸಿಟಿಯತ್ತ ಪ್ರಯಾಣ ಬೆಳೆಸಲು ತಯಾರಾಗಿ ನಿಂತಿವೆ. ಎಲ್ಲ ಬಸ್ಗಳ ಟಿಕೆಟ್ ಸೋಲ್ಡ್ಔಟ್ ಆಗಿದ್ದು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವವರ ಸಂಖ್ಯೆಗಿಂತಲೂ, ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವವರ ಸಂಖ್ಯೆಯೇ ಅಧಿಕವಾಗಿದೆ ಎನ್ನಲಾಗಿದೆ.
Advertisement
Advertisement
ಜಿಲ್ಲೆ ವ್ಯಾಪ್ತಿಯೊಳಗೆ ವಿವಿಧ ಊರುಗಳಿಗೆ ಬಸ್ ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರಲ್ಲಿ ಹರ್ಷ ಮನೆಮಾಡಿದೆ. ಇಂದು ಬೆಳಗ್ಗೆಯಿಂದ ಹಲವು ನಗರಗಳಿಗೆ ಬಸ್ ಸಂಚಾರ ಆರಂಭವಾಗಿದ್ದು, ರಾಜ್ಯ ಸರ್ಕಾರದ ನಿರ್ದೇಶನದಂತೆ ಒಂದು ಬಸ್ನಲ್ಲಿ ಗರಿಷ್ಠ 30 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೆ ಎಲ್ಲ ಪ್ರಯಾಣಿಕರಿಗೆ ಥರ್ಮಲ್ ಟೆಸ್ಟ್ ಮಾಡುತ್ತಿದ್ದು, ಸ್ಯಾನಿಟೈಸರ್ ವ್ಯವಸ್ಥೆ ಸಹ ಮಾಡಲಾಗಿದೆ. ಜೊತೆಗೆ ಪ್ರತಿಯೊಬ್ಬ ಪ್ರಯಾಣಿಕರ ವಿವರವನ್ನು ಸಿಬ್ಬಂದಿ ದಾಖಲಿಸಿಕೊಳ್ಳುತ್ತಿದ್ದಾರೆ.