– ಒಂದೇ ಕುಟುಂಬದ 5 ಮಂದಿಗೆ ಸೋಂಕು ದೃಢ
– ಸೊರಬದ ಓರ್ವ ಮಹಿಳೆಗೂ ತಗುಲಿದ ಕೊರೊನಾ
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 6 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ವರದಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
Advertisement
ಇಂದು ಹೊಸದಾಗಿ ಕೊರೊನಾ ಪ್ರಕರಣ ಪತ್ತೆಯಾಗಿರುವ 6 ಮಂದಿಯಲ್ಲಿ ಶಿವಮೊಗ್ಗದ ತುಂಗಾನಗರದ 3 ವರ್ಷದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಕುಟುಂಬ ಮೇ 15ರಂದು ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಬೇರೆ ಬೇರೆ ವಾಹನಗಳ ಮೂಲಕ ಆಗಮಿಸಿದ್ದರು. ಆದರೆ ತಮಿಳುನಾಡಿನಿಂದ ಬಂದಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಈ ಕುಟುಂಬದ ಎಲ್ಲಾ ಸದಸ್ಯರನ್ನು ಜಿಲ್ಲಾಡಳಿತ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ಇವರಲ್ಲಿ ಮೂರು ವರ್ಷದ ಇಬ್ಬರು ಮಕ್ಕಳು ಹಾಗೂ ವಯಸ್ಸಾದ ವೃದ್ಧರು ಇದ್ದ ಕಾರಣ ಹೋಂ ಕ್ವಾರಂಟೈನ್ ಮಾಡಲಾಗಿತ್ತು.
Advertisement
Advertisement
ಇಂದು ಈ 5 ಮಂದಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಎಲ್ಲಾ 5 ಮಂದಿ ಸೋಂಕಿರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಅಲ್ಲದೇ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 4 ಮಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
Advertisement
ಸೊರಬ ಮೂಲದ 60 ವರ್ಷದ ಮಹಿಳೆಯೊಬ್ಬರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಮಹಿಳೆಗೂ ಸಹ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ ಜಿಲ್ಲಾಡಳಿತ ಇಂದು ಕೊರೊನಾ ಸೋಂಕು ಪತ್ತೆಯಾದ ತುಂಗಾನಗರ ಹಾಗೂ ಸೊರಬದ ಹಳೆಪೇಟೆಯನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಸೀಲ್ಡೌನ್ ಮಾಡಿದೆ. ಅಲ್ಲದೇ ಈ ಬಡಾವಣೆಯ ಸುತ್ತಮುತ್ತಲಿನ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದ್ದಾರೆ.
ಸೋಂಕಿತರ ವಿವರ:
ರೋಗಿ-1498: ಶಿವಮೊಗ್ಗದ 60 ವರ್ಷದ ಮಹಿಳೆ. ತಮಿಳುನಾಡಿಗೆ ಪ್ರಯಾಣಿಸಿದ ಹಿನ್ನೆಲೆ.
ರೋಗಿ-1499: ಶಿವಮೊಗ್ಗದ 21 ವರ್ಷದ ಯುವತಿ. ತಮಿಳುನಾಡಿಗೆ ಪ್ರಯಾಣಿಸಿದ ಹಿನ್ನೆಲೆ.
ರೋಗಿ-1500: ಶಿವಮೊಗ್ಗದ 3 ವರ್ಷದ ಬಾಲಕ. ತಮಿಳುನಾಡಿಗೆ ಪ್ರಯಾಣಿಸಿದ ಹಿನ್ನೆಲೆ.
ರೋಗಿ-1501: ಶಿವಮೊಗ್ಗದ 3 ವರ್ಷದ ಬಾಲಕಿ. ತಮಿಳುನಾಡಿಗೆ ಪ್ರಯಾಣಿಸಿದ ಹಿನ್ನೆಲೆ.
ರೋಗಿ-1502: ಶಿವಮೊಗ್ಗದ 56 ವರ್ಷದ ಪುರುಷ. ತಮಿಳುನಾಡಿಗೆ ಪ್ರಯಾಣಿಸಿದ ಹಿನ್ನೆಲೆ.
ರೋಗಿ-1503: ಶಿವಮೊಗ್ಗದ 52 ವರ್ಷದ ಪುರುಷ. ತಮಿಳುನಾಡಿಗೆ ಪ್ರಯಾಣಿಸಿದ ಹಿನ್ನೆಲೆ.