ಬೆಂಗಳೂರು: ಸ್ಯಾಂಡಲ್ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಬಿಗ್ಬಾಸ್ ವಿನ್ನರ್ ಮಂಜು ಪಾವಗಡ ಭೇಟಿಯಾಗಿದ್ದಾರೆ.
Advertisement
ಮಂಜು ಪಾವಗಡ ಶಿವಣ್ಣನ ಅಭಿಮಾನಿಯಾಗಿದ್ದು, ಅವರ ಭೇಟಿಗಾಗಿ ಇಂದು ಶಿವಣ್ಣ ಅವರ ನಿವಾಸಕ್ಕೆ ಬಂದಿದ್ದರು. ಬಿಗ್ಬಾಸ್ ಫೈನಲ್ ಮುಂಚೆ ಶಿವಣ್ಣ ವೀಡಿಯೋ ಮೂಲಕ ಮಂಜುಗೆ ವಿಶ್ ಮಾಡಿದ್ದರು. ಮಂಜು ಬಿಗ್ಬಾಸ್ ಗೆದ್ದ ಬೆನ್ನಲ್ಲೇ ನೆಚ್ಚಿನ ನಟನ ಭೇಟಿ ಮಾಡಿ, ಶಿವಣ್ಣನಿಗೆ ಹೂಗುಚ್ಛ ನೀಡಿ, ಸಿಹಿ ತಿನಿಸಿ ಸಂಭ್ರಮಿಸಿದ ಅಶಿರ್ವಾದ ಪಡೆದಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆದ ರಾಖಿ ಸಾವಂತ್- ವೀಡಿಯೋ ವೈರಲ್
Advertisement
Advertisement
ಮಂಜು ಬರುತ್ತಿದ್ದಂತೆ ಕಂಗ್ರಾಟ್ಸ್ ಮಂಜು. ದೇವರು ನಿಮಗೆ ಒಳ್ಳೆಯ ಆಶಿರ್ವಾದ ಮಾಡಿದ್ದಾನೆ. ನೀವು ಗೆದ್ದಿರುವುದು ತುಂಬಾ ಸಂತೋಷವಾಯಿತು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಈ ವೇಳೆ ಮಂಜು ಶಿವರಾಜ್ ಕುಮಾರ್ ಅವರ ಕಾಲಿಗೆ ಬಿದ್ದು ಆಶಿರ್ವಾದ ಪಡೆದಿದ್ದಾರೆ.
Advertisement
ಬಿಗ್ಬಾಸ್ ಫಿನಾಲೆಗೆ ಕೆಲವು ದಿನಗಳು ಬಾಕಿ ಇರುವಾಗ ಬಿಗ್ಬಾಸ್ ಈ ಮನೆಯಲ್ಲಿ ನೆರವೇರದ ಆಸೆ ಇದ್ದರೆ ಹೇಳಿ ಎಂದು ಸ್ಪರ್ಧಿಗಳಿಗೆ ಸೂಚಿಸಿದ್ದರು. ಈ ವೇಳೆ ಮಂಜು ನಾನು ಶಿವರಾಜ್ಕುಮಾರ್ ಅಭಿಮಾನಿ ಫಿನಾಲೆಗೆ ಅವರ ಆಶಿರ್ವಾದದ ಒಂದು ವೀಡಿಯೋ ಬೇಕು ಎಂದು ಕೇಳಿಕೊಂಡಿದ್ದರು. ಶಿವರಾಜ್ಕುಮಾರ್ ಅವರು ಗೆದ್ದು ಬನ್ನಿ ಮಂಜು ಲವ್ ಯೂ ಎಂದು ಹೇಳಿ ಸಂದೇಶವನ್ನು ಕಳುಹಿಸಿದ್ದರು. ಶಿವಣ್ಣ ಅವರ ಶುಭ ಹಾರೈಕೆಯೊಂದಿಗೆ ಬಿಗ್ಬಾಸ್ ಗೆದ್ದಿರುವ ಮಂಜು ಅವರು ಇದೀಗ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ.