ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನೀಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿದ್ದು, ಜುಲೈ 23ರ ವರೆಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಇದೀಗ ನ್ಯಾಯಾಲಯ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಮತ್ತೆ ಜುಲೈ 27ರ ವರೆಗೆ ವಿಸ್ತರಿಸಿದೆ.
ಅಶ್ಲೀಲ ವೀಡಿಯೋಗಳನ್ನು ನಿರ್ಮಿಸುತ್ತಿದ್ದ ಆರೋಪದಡಿ ರಾಜ್ ಅವರನ್ನು ಜುಲೈ 19ರಂದು ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಇಂದು ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆ ರಾಜ್ ಕುಂದ್ರಾ ಅವರನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಆದರೆ ರಾಜ್ ಕುಂದ್ರಾ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಮತ್ತೆ 7 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರಿದರು. ನ್ಯಾಯಾಲಯ ಅವರ ಕಸ್ಟಡಿ ಅವಧಿಯನ್ನು ಜುಲೈ 27ರ ವರೆಗೆ ವಿಸ್ತರಿಸಿದೆ.
Advertisement
Maharashtra: Businessman Raj Kundra & one Ryan Thorpe have been sent to police custody till 27th July
(File pic) pic.twitter.com/SGLb8xJTwg
— ANI (@ANI) July 23, 2021
Advertisement
ಇತ್ತೀಚಿನ ಬೆಳವಣಿಗೆ ಎಂಬಂತೆ ಪೊಲೀಸರು ಪರಿಶೀಲನೆಗಾಗಿ ಶಿಲ್ಪಾ ಶೆಟ್ಟಿ ವಾಸಿಸುತ್ತಿರುವ ಮನೆಗೆ ರಾಜ್ ಕುಂದ್ರಾ ಅವರನ್ನು ಕರೆದೊಯ್ದಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
ಇತ್ತ ರಾಜ್ ಕುಂದ್ರಾ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ಪೊಲೀಸರು ಕಾನೂನುಬಾಹಿರವಾಗಿ ಬಂಧಿಸಿದ್ದಾರೆ ಎಂದು ರಾಜ್ ಕುಂದ್ರಾ ಪರ ವಕೀಲರು ಹೇಳಿದ್ದಾರೆ.
Advertisement
Police suspect that money earned from pornography was used for online betting. This is why transactions between Raj Kundra’s Yes bank account and United Bank of Africa account need to be investigated, Mumbai Police tells Court
— ANI (@ANI) July 23, 2021
ರಾಜ್ ಕುಂದ್ರಾ 2019ರಿಂದ ಪೋರ್ನ್ ವೀಡಿಯೋಗಳನ್ನು ನಿರ್ಮಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ವಾಟ್ಸಪ್ ಚಾಟ್ಗಳು ಲಭ್ಯವಾಗಿವೆ. ಅಲ್ಲದೆ ರಾಜ್ ಕುಂದ್ರಾ ಅವರು ಆ್ಯಪ್ ಹಾಗೂ ಅವುಗಳಲ್ಲಿನ ಕಂಟೆಂಟ್ಗಳ ಹಣಕಾಸು ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಫೆಬ್ರವರಿಯಲ್ಲೇ ತನಿಖೆ ಪ್ರಾರಂಭ!
ರಾಜ್ ಕುಂದ್ರಾ ಬಂಧನದ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಹೇಮಂತ್ ನಾಗರೇಲ್, ಪ್ರಕರಣದಲ್ಲಿ ರಾಜ್ ಕುಂದ್ರಾ ಪ್ರಮುಖ ಆರೋಪಿಯಾಗಿದ್ದಾರೆ. ಫೆಬ್ರವರಿಯಿಂದಲೂ ತನಿಖೆ ನಡಯುತ್ತಿದ್ದು, ಮುಂಬೈ ಪೊಲೀಸರು ಮಾಧ್ ಐಸ್ಲ್ಯಾಂಡ್ ನಲ್ಲಿನ ಬಂಗಲೆಯ ಮೇಲೆ ದಾಳಿ ನಡೆಸಿದಾಗ ‘ಲೈವ್ ಅಶ್ಲೀಲ ವಿಡಿಯೋ ಫಿಲ್ಮ್ ಮೇಕಿಂಗ್’ ದಂಧೆ ನಡೆಯುತ್ತಿತ್ತು. ಈ ಸಮಯದಲ್ಲಿ ಹಲವರನ್ನು ಬಂಧಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಯುಕೆ ಮೂಲದ ಕೆನ್ರಿನ್ ಕಂಪನಿಯ ಕುರಿತು ತನಿಖೆ ಮಾಡಿದಾಗ ರಾಜ್ ಕುಂದ್ರಾ ಹೆಸರು ಬೆಳಕಿಗೆ ಬಂದಿದೆ. ನಂತರ ರಾಜ್ ಕುಂದ್ರಾ ಅವರ ಮಾಜಿ ಕೆಲಸಗಾರ ಉಮೇಶ್ ಕಾಮತ್ ಅವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ವಿಚಾರಣೆ ನಡೆಸಿದಾಗ ಸಾಮಾಜಿಕ ಜಾಲತಾಣದ ಆ್ಯಪ್ನಲ್ಲಿ ಗೆಹ್ನಾ ವಸಿಷ್ಠ ಚಿತ್ರೀಕರಿಸಿದ ಎಂಟು ಅಶ್ಲೀಲ ವೀಡಿಯೊಗಳನ್ನು ಅಪ್ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ರಾಜ್ ಕುಂದ್ರಾ ಅವರೇ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಹ ಹಾಟ್ಶಾಟ್ಸ್ ಆ್ಯಪ್ ಮೂಲಕ ಅಶ್ಲೀಲ ವೀಡಿಯೋವನ್ನು ಸ್ಟ್ರೀಮಿಂಗ್ ಮಾಡಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಜಂಟಿ ಆಯುಕ್ತ ಮಿಲಿಂದ್ ಭರಂಬೆ ತಿಳಿಸಿದ್ದಾರೆ. ಆದರೆ ಹಾಟ್ಶಾಟ್ಸ್ ಆ್ಯಪ್ನ್ನು 2019ರಲ್ಲಿ 25 ಸಾವಿರ ಡಾಲರ್ ಗೆ ಮಾರಾಟ ಮಾಡಿರುವುದಾಗಿ ರಾಜ್ ಕುಂದ್ರಾ ಹೇಳಿದ್ದಾರೆ. ರಾಜ್ ಕುಂದ್ರಾ ಹಾಗೂ ಯುಕೆ ಮೂಲದ ಅಳಿಯ ಪ್ರದೀಪ್ ಬಕ್ಷಿ ಅವರು ಇಬ್ಬರೂ ಸೇರಿ ಈ ಆ್ಯಪ್ ನಡೆಸುತ್ತಿದ್ದರು ಎಂದು ವರದಿಗಳ ಮೂಲಕ ಬಹಿರಂಗವಾಗಿದೆ.
ಏನಿದು ಹಾಟ್ಶಾಟ್ಸ್ ಆ್ಯಪ್?
ಹಾಟ್ಶಾಟ್ಸ್ ಡಿಜಿಟಲ್ ಎಂಟರ್ಟೈನ್ಮೆಂಟ್ ಆ್ಯಪ್ ಆಗಿದ್ದು, ಇದನ್ನು ಕೆನ್ರಿನ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ರಾಜ್ ಕುಂದ್ರಾ ಅವರು ಇದಕ್ಕೆ ಕಂಟೆಂಟ್ ಸಪ್ಲೈ ಮಾಡಿ, ವಿಯಾನ್ ಇಂಡಸ್ಟ್ರೀಸ್ ಕಚೇರಿಯಿಂದ ಈ ಯುಕೆ ಮೂಲದ ಆ್ಯಪ್ನ್ನು ನಿಯಂತ್ರಿಸುತ್ತಿದ್ದಾರೆ.
ಬಾಲಿವುಡ್ ಕಿರುತರೆ ನಟರೂ ಭಾಗಿ!
ರಾಜ್ ಕುಂದ್ರಾ ಮಾತ್ರವಲ್ಲದೆ, ಇವರ ಬಳಿ ಐಟಿ ಕೆಲಸ ಮಾಡುತ್ತಿದ್ದ ರ್ಯಾನ್ ಜೆ ಥಾರ್ಪೆಯನ್ನೂ ಮುಂಬೈ ಪೆÇಲೀಸರು ಬಂಧಿಸಿದ್ದಾರೆ. ಅಲ್ಲದೆ ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಿದ್ದು, ಇದರಲ್ಲಿ ಕಿರುತೆರೆ ನಟಿ ಗೆಹ್ನಾ ವಶಿಷ್ಠ, ಯಾಸ್ಮಿನ್ ಆರ್. ಖಾನ್, ಮೋನು ಜೋಶಿ, ಪ್ರತಿಭಾ ನಲವಾಡೆ, ಎಂ.ಅತೀಫ್ ಅಹ್ಮದ್, ದೀಪಂಕರ್ ಪಿ. ಖಸ್ನಿವಿಸ್, ಭಾನುಸೂರ್ಯ ಠಾಕೂರ್, ತನ್ವಿರ್ ಹಶ್ಮಿ ಹಾಗೂ ಉಮೇಶ್ ಕಾಮತ್ ಅವರನ್ನು ಬಂಧಿಸಿದ್ದಾರೆ.
ಶಿಲ್ಪಾ ಶೆಟ್ಟಿ ಮೊದಲ ಪ್ರತಿಕ್ರಿಯೆ
ರಾಜ್ ಕುಂದ್ರಾ ಬಂಧನದ ನಂತರ, ನಟಿ ಶಿಲ್ಪಾ ಶೆಟ್ಟಿ ಗುರುವಾರ ಮೊದಲ ಬಾರಿಗೆ ಮೌನ ಮುರಿದಿದ್ದು, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಳವಾದ ಉಸಿರು ತೆಗೆದುಕೊಂಡು, ನಾನು ಜೀವಂತವಾಗಿರುವುದು ಅದೃಷ್ಟ ಎಂದು ತಿಳಿಯುತ್ತೇಣೆ. ಈ ಹಿಂದೆಯೂ ಸವಾಲುಗಳನ್ನು ಎದುರಿಸಿದ್ದೇನೆ, ಮುಂದೆಯೂ ಎದುರಿಸುತ್ತೇನೆ. ಇಂದಿನ ನನ್ನ ಜೀವನವನ್ನು ಬೇರೆಡೆ ಸೆಳೆಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಆದರೆ ರಾಜ್ ಕುಂದ್ರಾ ಅವರ ಪ್ರಕರಣದಲ್ಲಿ ಈ ವರೆಗೆ ಶಿಲ್ಪಾ ಶೆಟ್ಟಿಯವರ ಹೆಸರು ಕೇಳಿಬಂದಿಲ್ಲ. ಇದನ್ನೂ ಓದಿ: ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ: ಶಿಲ್ಪಾ ಶೆಟ್ಟಿ