ತುಮಕೂರು: ಶಿರಾ ಉಪಚುನಾವಣೆಯ ಜಿದ್ದಾಜಿದ್ದಿನ ಅಖಾಡದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಇರೋಂದರಿಂದ ನಾಳೆಯ ಮತ ಎಣಿಕೆ ಇನ್ನಷ್ಟು ಮತ್ತಷ್ಟು ಕುತೂಹಲ ಕೆರಳಿಸಿದೆ.
Advertisement
ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಒಟ್ಟು 24 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಸುತ್ತಿನಲ್ಲಿ ತೀವ್ರ ಹಣಾಹಣಿಯಿಂದಾಗಿ ರೋಚಕತೆಯ ಘಟ್ಟ ತಲುಪುವ ಸಾಧ್ಯತೆ. ಈ ಬಾರಿ ಅಂಚೆ 4821 ಅಂಚೆ ಮತ ಸೇರಿ ಒಟ್ಟು ಶೇ.84 ರಷ್ಟು ಮತದಾನವಾಗಿದ್ದು. ಇವಿಎಂ ಮತಯಂತ್ರದಲ್ಲಿ 1 ಲಕ್ಷ 77 ಸಾವಿರದ 645 ಮತದಾರರು ಮತಚಲಾಯಿಸಿದ್ದಾರೆ.
Advertisement
Advertisement
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮುಂಜಾನೆ 7 ಗಂಟೆಗೆ ಸ್ರ್ಟಾಂಗ್ ರೂಂ ತೆರಯಲಿದ್ದು, 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕಾ ಕೇಂದ್ರದ ಸುತ್ತ ಮೂರು ಸುತ್ತಿನ ಭದ್ರತೆ ನಿಯೋಜಿಸಿದ್ದು, ಸೆಂಟ್ರಲ್ ಆರ್ಮಡ್ ಫೊರ್ಸ್ ಕಾರ್ಯನಿರ್ವಹಿಲಿದೆ. 2 ಕೆ.ಎಸ್.ಆರ್.ಪಿ, ಮೂರು ಡಿವೈಎಸ್ಪಿ, ಸಿಪಿಐ, ಪಿಎಸ್ಐ ಗಳು ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ಪೊಲೀಸರನ್ನ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
Advertisement
ಒಟ್ಟು 14 ಟೇಬಲ್ ಗಳಲ್ಲಿ 24 ಸುತ್ತು ಮತ ಎಣಿಕೆ ನಡೆಯಲಿದ್ದು, 330 ಮತಗಟ್ಟೆಗಳ ರಿಸಲ್ಟ್ ಹೊರಬೀಳಲಿದೆ. ಕೋವಿಡ್ ಹಿನ್ನಲೆಯಲ್ಲಿ ಭಾರೀ ಮುಂಜಾಗ್ರತೆವಹಿಸಿದ್ದು ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಥರ್ಮಲ್ ಸ್ಕಾನಿಂಗ್ ನಡೆಯಲಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ನಾಡಿದ್ದು ಬೆಳಗ್ಗೆ 6 ವರೆಗೂ ಮತ ಎಣಿಕಾ ಕೇಂದ್ರದ ಸುತ್ತ 5 ಕಿ.ಮೀ ವ್ಯಾಪ್ತಿ ಹಾಗೂ ಶಿರಾ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.