ಕಾರವಾರ: ಉಗ್ರ ಸಂಘಟನೆಗೆಗಳ ಸಂಘಟನೆಗಾಗಿ ಶಿರಸಿ ತಾಲೂಕಿನ ಬನವಾಸಿಯ ಮೌಲ್ವಿ ಹೆಸರಿನಲ್ಲಿ ಸಿಮ್ ಬಳಕೆಯಾಗಿದೆ. ಈ ಕುರಿತು ಶಿರಸಿ ತಾಲೂಕಿನ ಬನವಾಸಿ ಮೂಲದ ಮೌಲ್ವಿ ಅಬ್ದುಲ್ ಮತೀನ್ನನ್ನು ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ ತನಿಖೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.
ಅಬ್ದುಲ್ ಮತೀನ್ ಉಡುಪಿ ಜಿಲ್ಲೆಯ ಬೈಂದೂರಿನ ಮದರಸಾದಲ್ಲಿ ಅಧ್ಯಯನ ಮಾಡುತ್ತಿದ್ದ, ಈ ವೇಳೆಯಲ್ಲಿ ಈತನೊಂದಿಗೆ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಸಹ ಮದರಸಾದಲ್ಲಿ ಓದುತ್ತಿದ್ದು, ಈ ವೇಳೆ ಶಿರಸಿಯ ಅಬ್ದುಲ್ ಮತೀನ್ ತನ್ನ ಸಹಪಾಠಿಗಳಾದ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳಿಗೆ ತನ್ನದೇ ಹೆಸರಿನ ದಾಖಲೆಗಳಲ್ಲಿ ಸಿಮ್ ಕೊಡಿಸಿದ್ದ.
Advertisement
Advertisement
ಈತ ವಿದ್ಯಾಭ್ಯಾಸ ಮುಗಿಸಿ ಮಂಗಳೂರಿನ ಮದರಸಾ ಒಂದರಲ್ಲಿ ಸಹಾಯಕ ಮೌಲ್ವಿಯಾಗಿ ಕಾರ್ಯ ನಿರ್ವಹಿಸುತಿದ್ದ. ಆದರೇ ಈತ ತನ್ನ ಸ್ನೇಹಿತರಿಗೆ ತನ್ನ ಹೆಸರಿನಲ್ಲಿ ಸಿಮ್ ಕೊಡಿಸಿದ್ದು, ಈ ಸಿಮ್ಗಳು ಪಶ್ಚಿಮ ಬಂಗಾಳ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಬಳಕೆಯಾಗುತ್ತಿವೆ. ಈತನ ಹೆಸರಿನಲ್ಲಿರುವ ಸಿಮ್ ನಿಷೇಧಿತ ಜೆ.ಎಮ್.ಬಿ ಸಂಘಟನೆಯ ಸಂಘಟನೆಗೂ ಬಳಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಿ.ಸಿ.ಬಿ, ಇಡಿ, ಎನ್.ಐ.ಎ ಕೂಡ ಈತನನ್ನು ಕರೆಯಿಸಿ ಹೆಚ್ಚಿನ ತನಿಖೆ ಕೈಗೊಂಡಿದೆ.
Advertisement
Advertisement
ಶಿರಸಿಯ ಬನವಾಸಿ ಮೌಲ್ವಿ ಹೆಸರಿನಲ್ಲಿ ಒಂಬತ್ತಕ್ಕೂ ಹೆಚ್ಚು ಸಿಮ್ ಬಳಕೆಯಾಗುತ್ತಿವೆ. ಇತನ ಹೆಸರಿನಲ್ಲಿ ಬಳಕೆಯಾಗುತ್ತಿರುವ ಸಿಮ್ಗಳು ಪಶ್ಚಿಮ ಬಂಗಾಳ, ಜಮ್ಮು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಕ್ರಿಯವಾಗಿವೆ. ತನಿಖೆ ವೇಳೆ ತಾನು ಉಡುಪಿ ಜಿಲ್ಲೆಯ ಬೈಂದೂರಿನ ಮದರಸಾದಲ್ಲಿ ಕಲಿಯುತಿದ್ದಾಗ ತನ್ನ ಸ್ನೇಹಿತರಿಗೆ ತನ್ನ ದಾಖಲೆ ಮೂಲಕ ಅಬ್ದುಲ್ ಮತೀನ್ ಸಿಮ್ ಖರೀದಿಸಿ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಯಾರು ಯಾರಿಗೆ ಸಿಮ್ ನೀಡಿದ್ದೇನೆ ಎಂಬುವ ಮಾಹಿತಿಯನ್ನು ಕೇಂದ್ರ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದಾನೆ.
ಕಳೆದ ಆರು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಯಲ್ಲಾಪುರ-ಅಂಕೋಲ ಗಡಿಯಲ್ಲಿ ನಿಷೇಧಿತ ಸೆಟಲೈಟ್ ಫೋನ್ಗಳು ಸಕ್ರಿಯವಾಗಿದ್ದು, ಐದಕ್ಕೂ ಹೆಚ್ಚು ಬಾರಿ ಬಳಸಲಾಗಿದೆ. ಈ ಕುರಿತು ಸಹ ಜಿಲ್ಲಾ ಪೊಲೀಸರು, ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಕಾರವಾರ, ಯಲ್ಲಾಪುರ ಭಾಗದ ಕಾಡುಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಆದರೇ ಇದರ ಬಗ್ಗೆ ಹೆಚ್ಚಿನ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಬರಿಗೈಯಲ್ಲಿ ಹಿಂತಿರುಗುವಂತಾಗಿತ್ತು.