ಬೆಂಗಳೂರು: ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವುದಿಲ್ಲ ಎಂದು ಶಾಲೆಗಳು ಹೇಳುವಂತಿಲ್ಲ ಎಂಬ ಸುರೇಶ್ ಕುಮಾರ್ ಹೇಳಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಸಿಡಿದೆದ್ದಿದೆ.
ಶಿಕ್ಷಣ ಸಚಿವರು ತಮ್ಮ ಹೇಳಿಕೆಗೆ ನವೆಂಬರ್ 30ರೊಳಗೆ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದರೆ ಆನ್ಲೈನ್ ಕ್ಲಾಸ್ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುವ ಮೂಲಕ ಸರ್ಕಾರಕ್ಕೆ ಸಡ್ಡು ಹೊಡೆದಿದೆ.
Advertisement
ಶಿಕ್ಷಣ ಮಂತ್ರಿಗಳು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಸಚಿವರು ಮನುಷ್ಯತ್ವ ಇಲ್ಲದೆ ಹೇಳಿಕೆ ಕೊಡ್ತಿದ್ದಾರೆ. ಶುಲ್ಕ ಕಟ್ಟಡೇ ಹೋದರೆ ಶಿಕ್ಷಕರು, ಇತರೇ ಸಿಬ್ಬಂದಿ ಮಣ್ಣು ತಿನ್ನಬೇಕಾ? ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಆಕ್ರೋಶ ಹೊರಹಾಕಿದ್ದಾರೆ.