ರಾಯಚೂರು: ಕಳೆದ 21 ದಿನಗಳಿಂದ ಕೋವಿಡ್ ಸೋಂಕಿತ ಕುಟುಂಬಗಳಿಗೆ, ನಿರ್ಗತಿಕರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಮತ್ತು ಅವರ ಬಳಗದವರು ಮಾಡುತ್ತಿದ್ದಾರೆ.
ಕೆಎಸ್ಎನ್ ಅನ್ನ ದಾಸೋಹ ಕೇಂದ್ರದ ಮೂಲಕ ಉಪಹಾರ, ಊಟ ವಿತರಣೆ ನಡೆದಿದೆ. 30 ವಾಹನಗಳ ಮೂಲಕ ದೇವದುರ್ಗದ ಗ್ರಾಮಗಳಿಗೂ ಊಟ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು, ಅವರ ಸಹಾಯಕರು, ಆಸ್ಪತ್ರೆ ಸಿಬ್ಬಂದಿಗಳಿಗೆ ಊಟ ಉಪಹಾರ, ಮಾಸ್ಕ್ ವಿತರಣೆ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಮದುವೆಯಾದ ಕುರಿತು ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ ಪ್ರಣೀತಾ..!
Advertisement
Advertisement
ಲಾಕ್ಡೌನ್ ಹಿನ್ನೆಲೆಯಲ್ಲಿ ಸೋಂಕಿತರಿಗೆ ಪೌಷ್ಠಿಕತೆ ಕೊರತೆಯಾಗಬಾರದೆಂಬ ಉದ್ದೇಶದಿಂದ ಮತ್ತು ಉತ್ತಮ ಆಹಾರದಿಂದ ಶೀಘ್ರವೇ ಗುಣಮುಖರಾಗಲು ಈ ರೀತಿಯ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಸೋಂಕಿತರು ಪಟ್ಟಣದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ಸಹಾಯಕರು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಒಟ್ಟು 46 ಸಾವಿರಕ್ಕೂ ಅಧಿಕ ಜನರಿಗೆ ಪ್ರತಿ ನಿತ್ಯ ಊಟ, ಉಪಹಾರ ನೀಡುವ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ
Advertisement
Advertisement
ಅಧಿಕೃತವಾಗಿ ಕೆಎಸ್ಎನ್ ಅನ್ನ ದಾಸೋಹ ಕೇಂದ್ರಕ್ಕೆ ಇಂದು ಚಾಲನೆ ನೀಡಲಾಯಿತು. ಈ ವೇಳೆ ವಿವಿಧ ಮಠಗಳ ಸ್ವಾಮಿಗಳು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇತರರು ಭಾಗವಹಿಸಿದ್ದರು. ಇದನ್ನೂ ಓದಿ: ಮೂರು ಮಕ್ಕಳ ನೀತಿ ಪ್ರಕಟಿಸಿದ ಚೀನಾ ಸರ್ಕಾರ – ಯಾಕೆ ಈ ನಿರ್ಧಾರ?