ಕೊಪ್ಪಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಶಾಸಕರಿಗೆ ಕೊರೊನಾ ದೃಢಪಟ್ಟ ಮಾಹಿತಿಯನ್ನು ಜಿಲ್ಲಾಧಿಕಾರಿ ಸೂರಳ್ಕರ್ ವಿಕಾಸ್ ಕಿಶೋರ್ ಬಹಿರಂಗಪಡಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಶಾಸಕ ರಾಘವೇಂದ್ರ ಹಿಟ್ನಾಳ್ಗೆ ಕೊರೊನಾ ಸೊಂಕು ತಗಲಿರುವ ಬಗ್ಗೆ ಕ್ಷೇತ್ರದಾದ್ಯಂತ ಹರಿದಾಡಿತ್ತು.
Advertisement
Advertisement
ಈಗ ಸ್ವತಃ ಜಿಲ್ಲಾಧಿಕಾರಿಗಳೇ ಶಾಸಕರಿಗೆ ಸೋಂಕು ತಗಲಿರುವುದನ್ನು ದೃಢಪಡಿಸಿದ್ದಾರೆ. ಕೆಲದಿನಗಳ ಹಿಂದೇ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿರವರಿಗೆ ಕೊರೊನಾ ದೃಢಪಟ್ಟಿತ್ತು. ಗಂಗಾವತಿ ಶಾಸಕರ ಪಕ್ಕದಲ್ಲಿಯೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕುಳಿತಿದ್ದರು. ಅದಕ್ಕಾಗಿ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದರು. ಇದನ್ನೂ ಓದಿ: ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಕೊರೊನಾ ಸೋಂಕು
Advertisement
Advertisement
ಹೋಮ್ ಕ್ವಾರಂಟೈನ್ ಮುಗಿಸಿಕೊಂಡು ಎರಡು ದಿನಗಳ ಹಿಂದೆಯಷ್ಟೇ ಕಾಟ್ರಳ್ಳಿ ಗ್ರಾಮದ ಹಾಲು ಘಟಕವನ್ನ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಅದಾದ ಬಳಿಕ ಹಿಟ್ನಾಳ್ಗೆ ಕೊರೊನಾ ಧೃಡಪಟ್ಟಿದೆ. ಈಗ ಶಾಕಸರ ಒಡನಾಡಿಯಾಗಿದ್ದ ಕಾರ್ಯಕರ್ತರಿಗೂ ಹಾಗೂ ಹಿಂಬಾಲಕರಿಗೂ ಆತಂಕ ಶುರುವಾಗಿದೆ.