ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ವರ್ಸಸ್ ಅಧಿಕಾರಿಗಳ ಸಮರ ಜೋರಾಗಿದೆ. ಸರ್ಕಾರಿ ಸಭೆಯೊಂದರಲ್ಲಿ ಶಾಸಕರ ಬಗ್ಗೆ ತಹಶೀಲ್ದಾರ್ ಬಳಸಿದ ಆ ಒಂದು ಪದ ಕ್ಷೇತ್ರದಲ್ಲಿ ಬಾರಿ ಸಂಚಲ ಸೃಷ್ಟಿಸಿದೆ.
Advertisement
ಕಳೆದ 3 ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಸರ್ಕಾರಿ ಕಾರ್ಯಕ್ರಮವನ್ನ ಆಯೋಜಿಸಿದ್ದರು. ಆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ರು. ಆ ಕಾರ್ಯಕ್ರಮದಲ್ಲಿ ಸ್ಥಳೀಯ ಅಧಿಕಾರಿಗಳ ನಡೆ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ಹೊರ ಹಾಕಿದ್ರು. ಈ ವೇಳೆ ಮದ್ಯ ಪ್ರವೇಶಿಸಿದ ತಹಶೀಲ್ದಾರ್ ರೂಪ ಅವರನ್ನ ಶಾಸಕರು ಸೆಟಪ್ ಅಂತೇಳಿ ಗದರಿದ್ದರು. ಇದಕ್ಕೆ ಪ್ರತಿಯಾಗಿ ತಹಶೀಲ್ದಾರ್ ರೂಪ ಅವರು “ಯೂ ಶಟಪ್” ಅಂತ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ತಿರುಗೇಟು ನೀಡಿದ್ದರು. ಈ ವೇಳೆ ಶಾಸಕ-ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆಯಿತು. ತಹಶೀಲ್ದಾರ್ ನಡೆಯನ್ನ ಸಚಿವ ಮತ್ತು ಹಿರಿಯ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು. ಇದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನ ಮತ್ತಷ್ಟು ಕೆರಳಿಸಿದ್ದು, ಅಂದೇ ಇಲ್ಲಿನ ಅಧಿಕಾರಿಗಳ ಕಾರ್ಯವೈಖರಿಯನ್ನ ಜನರೆದುರೇ ಪ್ರದರ್ಶನ ಮಾಡುವ ಸವಾಲು ಹಾಕಿದರು.
Advertisement
Advertisement
ಅಂದು ಹಾಕಿದ ಸವಾಲಿನಂತೆ ಜನಸಂಪರ್ಕ ಸಭೆಗೆ ಶಾಸಕರು ದಿನಾಂಕ ನಿಗದಿ ಮಾಡಿದ್ದರು. ಆದರೆ ತಹಶೀಲ್ದಾರ್ ರೂಪ ಕೊರೊನಾ ನೆಪ ಹೇಳಿ ಶಾಸಕರು ನಿಗದಿ ಮಾಡಿದ್ದ ಸಭೆಯನ್ನ ಏಕಾಏಕಿ ರದ್ದು ಮಾಡಿದ್ದರು. ಡಿಸಿ ಬಳಿಗೆ ತೆರಳಿದ ಶಾಸಕರು ವಿಶೇಷ ಅನುಮತಿ ಪಡೆದು ಸಭೆ ನಿಗದಿ ಮಾಡಿಸಿದ್ರು. ನಿಗದಿಯಂತೆ ಇಂದು ನಡೆದ ಸಭೆಯಲ್ಲಿ ಸಮಸ್ಯೆಗಳು ಹಾಗೂ ಪರಿಹಾರ ಸಿಗದ ತಾವು ಕೂಟ್ಟ ಅರ್ಜಿಗಳನ್ನ ಹಿಡಿದು ನೂರಾರು ಮಂದಿ ಸೇರಿದ್ದರು. ಆರಂಭದಿಂದ ಅಂತ್ಯದವರೆಗೂ ಸಭೆಯಲ್ಲಿ ಭಾಗವಹಿಸಿದ್ದ ಜನರು ತಹಶೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ವಿರುದ್ಧ ದೂರುಗಳ ಸುರಿಮಳೆಗೈದರು. ಒಂದೊಂದು ಅರ್ಜಿ ಪಡೆದಾಗಲೂ ಹಾಗೂ ಅದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊಟ್ಟ ಸಮಜಾಯಿಷಿಗೆ ಶಾಸಕರು ಕಟುವಾಗಿಯೇ ಜನರೆದುರು ಆಕ್ರೋಶ ಹೊರ ಹಾಕಿದ್ರು. ಆ ಮೂಲಕ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ಅವರ ಅಂದಿನ ನಡೆಗೆ ತೀಕ್ಷಣವಾಗಿಯೇ ತಿರುಗೇಟು ನೀಡಿದರು.
Advertisement
ಇಂದಿನ ಜನಸಂಪರ್ಕ ಸಭೆಯಲ್ಲಿ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸುವ ಕೆಲಸ ಮಾಡಲಾಯ್ತು. ಈ ವೇಳೆ ಸ್ಥಳದಲ್ಲಿದ್ದ ಶಾಸಕರ ಬೆಂಬಲಿಗರು, ಸಾರ್ವಜನಿಕರು ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದ್ರು. ಇನ್ನು ಆಕ್ಷೇಪಾರ್ಹ ಅರ್ಜಿಗಳನ್ನ ಹೊತುಪಡಿಸಿ, ತಾಂತ್ರಿಕ ಸಮಸ್ಯೆ ಹಾಗೂ ಇತರೆ ಸಮಸ್ಯೆ ಇರುವ ಅರ್ಜಿಗಳಿಗೆ ಇಂತಿಷ್ಟು ದಿನಗಳ ಕಾಲಾವಕಾಶ ಪಡೆದು ಇತ್ಯರ್ಥ ಮಾಡುವ ಭರವಸೆ ನೀಡಲಾಯ್ತು.
ಇಂದಿನ ಜನಸಂಪರ್ಕ ಸಭೆಯಲ್ಲಿ ಕೊರೊನಾ ರೂಲ್ಸ್ ಸಂಪೂರ್ಣ ಉಲ್ಲಂಘನೆಯಾಗಿತ್ತು. ಶಾಸಕ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಸಮ್ಮುಖದಲ್ಲೇ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದು ಎದ್ದು ಕಾಣ್ತಿತ್ತು. ಕೊರೊನಾ ಆತಂಕ ಮರೆತು ಜನ, ಕಚೇರಿ ಸಿಬ್ಬಂದಿ ಗುಂಪು ಗುಂಪಾಗಿ ಸೇರಿದ್ದರು. ಕೆಲವೊಮ್ಮೆ ಪೊಲೀಸರು ಜನರ ನಿಯಂತ್ರಿಸಲು ಹರಸಾಹಸ ಪಡಬೇಕಾಯ್ತು.