– 7ನೇ ವಿಕೆಟ್ಗೆ 123 ರನ್ಗಳ ಜೊತೆಯಾಟ
– 54 ರನ್ಗಳ ಮುನ್ನಡೆಯಲ್ಲಿ ಆಸ್ಟ್ರೇಲಿಯಾ
ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಅಂತಿಮ ಟೆಸ್ಟ್ ಪಂದ್ಯಾಟದಲ್ಲಿ ಭಾರತದ ಬಾಲಂಗೊಚಿಗಳ ಉತ್ತಮ ಬ್ಯಾಟಿಂಗ್ನಿಂದಾಗಿ ಆಸ್ಟ್ರೇಲಿಯಾದ ವಿರುದ್ಧ ದಿಟ್ಟ ಹೋರಾಟ ನಡೆಸಿದೆ. ಭಾರತದ ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಏಳನೇ ವಿಕೆಟ್ಗೆ 123 ರನ್ಗಳ ಜೊತೆಯಾಟವಾಡಿ ನೂತನ ದಾಖಲೆಯೊಂದನ್ನು ಬರೆದು ತಂಡವನ್ನು ಪಾರು ಮಾಡಿದ್ದಾರೆ.
Advertisement
ಮೊದಲ ಪಂದ್ಯವಾಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಸಲ ಬ್ಯಾಟಿಂಗ್ ಅವಕಾಶ ಪಡೆದಿರುವ ಶಾರ್ದೂಲ್ ಭಾರತದ ಬ್ಯಾಟಿಂಗ್ ಕುಸಿತ ಕಂಡಾಗ ತಂಡಕ್ಕೆ ಆಸರೆಯಾಗಿದ್ದಾರೆ. 186 ರನ್ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಶತಕದ ಜೊತೆಯಾಟವಾಡಿದ ಈ ಜೋಡಿ ಚೇತರಿಕೆ ನೀಡಿತು. ಈ ಇಬ್ಬರು ಯುವ ಆಟಗಾರರು ಚೊಚ್ಚಲ ಅರ್ಧಶತಕ ಬಾರಿಸಿ ಸಂಭ್ರಮಿಸಿದ್ದಾರೆ.
Advertisement
Two special half centuries ????????????????
One special partnership ????????????????
The highest 7th-wicket stand for an Indian pair at the Gabba ????️????#AUSvIND pic.twitter.com/eodDc91wZK
— BCCI (@BCCI) January 17, 2021
Advertisement
1991ರಲ್ಲಿ ಭಾರತದ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ ಏಳನೇ ವಿಕೆಟ್ಗೆ 58 ರನ್ ಜೊತೆಯಾಟವಾಡಿದ್ದರು. ಈಗ ಶಾರ್ದೂಲ್, ಸುಂದರ್ 217 ಎಸೆತಗಳಲ್ಲಿ 123 ರನ್ಗಳ ಜೊತೆಯಾಟವಾಡಿ 30 ವರ್ಷಗಳ ನಂತರ ಹೊಸ ದಾಖಲೆ ನಿರ್ಮಿಸಿದ್ದಾರೆ.
Advertisement
Words of praise from Captain @imVkohli ????????#AUSvIND pic.twitter.com/OgCZXpSsvt
— BCCI (@BCCI) January 17, 2021
ಮೂರನೇ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ 62 ರನ್ (144 ಎಸೆತ 7 ಬೌಂಡರಿ ಮತ್ತು 1 ಸಿಕ್ಸರ್) ಸಿಡಿಸಿದರೆ, ಶಾರ್ದೂಲ್ ಠಾಕೂರ್ 67 ರನ್ (115 ಎಸೆತ 9 ಬೌಂಡರಿ ಮತ್ತು 2 ಸಿಕ್ಸರ್) ಬಾರಿಸಿ ತಂಡದ ಮೊತ್ತ 300ರ ಗಡಿ ದಾಟುವಂತೆ ಮಾಡಿದರು.
Best shots of 2021 ????????#Sundar #INDvsAUS pic.twitter.com/tPmbjzdePS
— Vivek (@Usingvivek) January 17, 2021
2ನೇ ದಿನದಾಟದ ಅಂತ್ಯಕ್ಕೆ 62 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ಮೂರನೇ ದಿನದಾಟದಲ್ಲಿ 111.4 ಓವರ್ಗಳಲ್ಲಿ 336 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 33ರನ್ ಹಿನ್ನಡೆ ಅನುಭವಿಸಿದೆ.
Stumps on Day 3 of the 4th Test.
Australia 369 & 21/0, lead India 336 by 54 runs.
Scorecard – https://t.co/bSiJ4wW9ej #AUSvIND pic.twitter.com/sQ2G15jMU4
— BCCI (@BCCI) January 17, 2021
33 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ಗಳಿಸಿದೆ. ಇದರೊಂದಿಗೆ ಮುನ್ನಡೆಯನ್ನು 54ರನ್ಗಳಿಗೆ ಏರಿಸಿದೆ 20 ರನ್(22 ಎಸೆತ 4 ಬೌಂಡರಿ) ಬಾರಿಸಿರುವ ಡೇವಿಡ್ ವಾರ್ನರ್ ಮತ್ತು 1 ರನ್ (14 ಎಸೆತ) ಗಳಿಸಿರುವ ಮಾರ್ನಸ್ ಹ್ಯಾರಿಸ್ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.