ವಿಜಯಪುರ: 48 ವರ್ಷದ ವ್ಯಕ್ತಿಯ ಮೂತ್ರಕೋಶದಲ್ಲಿ 750 ಗ್ರಾಂ ತೂಕದ ಕಲ್ಲು ಪತ್ತೆಯಾಗಿದ್ದು, ವೈದ್ಯಕೀಯ ಲೋಕದಲ್ಲಿಯೇ ಅಪರೂಪದ ಪ್ರಕರಣ ಇದಾಗಿದೆ.
ವ್ಯಕ್ತಿ ಮೂತ್ರಕೊಶದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವ್ಯಕ್ತಿಯನ್ನು ಪರೀಕ್ಷೆ ಮಾಡಿದಾಗ ಮೂತ್ರಕೋಶದಲ್ಲಿ ಕಲ್ಲು ಪತ್ತೆಯಾಗಿತ್ತು. ಇದನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯಬೇಕು ಎಂದು ವೈದ್ಯರು ಸೂಚಿಸಿದ್ದಾರೆ.
Advertisement
Advertisement
ಅಂತೆಯೇ ಡಾ. ಅಶೋಕ್ ಬಿರಾದಾರ ಹಾಗೂ ತಂಡ ಶಸ್ತ್ರಚಿಕಿತ್ಸೆಯ ಮೂಲಕ ವ್ಯಕ್ತಿಯ ಮೂತ್ರಕೋಶದಲ್ಲಿದ್ದ ಕಲ್ಲು ಹೊರತೆಗೆದಿದ್ದಾರೆ. ವಿಜಯಪುರ ನಗರದ ಭಾಗ್ಯವಂತಿ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ವೈದ್ಯಕೀಯ ಭಾಷೆಯಲ್ಲಿ ಗೇಂಟ್ ವೆಸೈಕಲ್ ಕ್ಯಾಲಕ್ಯೂಲಸ್ ಅಥವಾ ಲಾರ್ಜ್ ಯೂರಿನರಿ ಬ್ಲ್ಯಾಡರ್ ಸ್ಟೋನ್ ಎಂದು ಕರೆಯಲಾಗುತ್ತದೆ. ಇದರಿಂದ ಮೂತ್ರ ಸರಿಯಾಗಿ ಹೋಗುವುದಿಲ್ಲ. ಮೂತ್ರ ತಡೆಯುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಸದ್ಯ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಕಲ್ಲು ಹೊರ ತೆಗೆದಿದ್ದಾರೆ.
Advertisement
ವೈದ್ಯಕೀಯ ಲೋಕದಲ್ಲಿ ಇಷ್ಟು ಬೃಹತ್ ಕಲ್ಲು ಪತ್ತೆಯಾಗಿದ್ದು ಅಪರೂಪವಾಗಿದ್ದು, ವೈದ್ಯರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.