– ವಿಚಾರಣೆಗೆ ಹಾಜರಾದ ಅಕುಲ್, ಸಂತೋಷ್
ಬೆಂಗಳೂರು: ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೇ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ ಎಂದು ನಟ ಸಂತೋಷ ಹೇಳಿದರು. ಇದನ್ನೂ ಓದಿ: ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ, ಭಾರೀ ಹಣ ಖರ್ಚು ಮಾಡ್ತಾರೆ- ನಟ ಸಂತೋಷ್ ಕುಮಾರ್
ಸಿಸಿಬಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಂತೋಷ್, ವಾಟ್ಸಪ್ ಮೂಲಕ ಸಿಸಿಬಿ ಅವರು ನನಗೆ ನೋಟಿಸ್ ಕಳುಹಿಸಿದ್ದಾರೆ. ನನಗೂ ಈ ಡ್ರಗ್ಸ್ ವಿಚಾರದಲ್ಲಿ ಏನೂ ಸಂಬಂಧ ಎಂದು ಹುಡುಕುತ್ತಿದ್ದಾಗ ನಾಲ್ಕು ವರ್ಷದ ಹಿಂದೆ ಒಂದು ವಿಲ್ಲಾದಲ್ಲಿ ಉಳಿದುಕೊಂಡಿದ್ದೆ. ಆಗ ಆರೋಪಿ ಆಗಿರುವ ವೈಭವ್ ಜೈನ್ ಪರಿಚಯವಾಗಿತ್ತು. ವೈಭವ್ ವಯಕಾಲಿಕನಲ್ಲಿ ಒಂದು ಜ್ಯುವೆಲರಿ ಶಾಪ್ ಇಟ್ಟುಕೊಂಡಿದ್ದನು. ಆತನಿಗೆ ಎರಡು ಮಕ್ಕಳಿವೆ, ಕುಟುಂಬಸ್ಥರ ಜೊತೆ ಶಬರಿಮಲೆ, ತಿರುಪತಿಗೆ ಬರುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್
Advertisement
ನನಗೆ ದೂರವಾಗುತ್ತದೆ ಎಂದು ವಿಲ್ಲಾಯಿಂದ ಸಿಟಿಗೆ ಶಿಫ್ಟ್ ಆದೆ. ಕೆಲವು ಕಡೆ ಪಾರ್ಟಿ ಮಾಡಲು ವಿಲ್ಲಾ ಕೊಡುತ್ತಾರೆ. ಅದೇ ರೀತಿ ನನ್ನ ಮನೆಯನ್ನು ಮಾರ್ಕೆಟಿಂಗ್ ಮಾಡಲು ವೈಭವ್ಗೆ ವಿಲ್ಲಾ ಕೊಟ್ಟಿದ್ದೆ. ಆದರೆ 10ಕ್ಕಿಂತ ಹೆಚ್ಚು ಜನರನ್ನು ಸೇರಿಸಬಾರದೆಂದು ತಿಳಿಸಿದ್ದೆ. ಆದರೂ ಹೆಚ್ಚಿನ ಜನರನ್ನು ಕರೆಸುತ್ತಿದ್ದನು. ಇದೇ ವಿಚಾರಕ್ಕೆ ನನಗೂ ವೈಭವ್ ಜೈನ್ಗೂ ವ್ಯವಹಾರದ ವಿಚಾರದಲ್ಲಿ ಎರಡು ಬಾರಿ ಜಗಳವಾಗಿತ್ತು. ಯಾಕೆ ಜಗಳ ಆಗಿತ್ತು? ಆ ಎಲ್ಲಾ ಬಗೆಗಿನ ಡಾಕ್ಯುಮೆಂಟ್ಗಳನ್ನ ತೆಗೆದುಕೊಂಡು ಹೋಗುತ್ತಿದ್ದೇನೆ. ಸಿಸಿಬಿ ವಿಚಾರಣೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದರು.
Advertisement
Advertisement
ನಾಲ್ಕು ಬಾರಿ ಜಗಳ ಮಾಡಿದ ನಂತರ ಅವನ ಹತ್ತಿರ ನನ್ನ ವ್ಯವಹಾರವನ್ನು ಕ್ಯಾನ್ಸಲ್ ಮಾಡಿದೆ. ಆದರೆ ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೆ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ. ಆದರೆ ಈಗ ಸಿಸಿಬಿ, ಮಾಧ್ಯಮಗಳಿಂದ ಅವನ ಬಗ್ಗೆ ಗೊತ್ತಾಗುತ್ತಿದೆ ಎಂದು ಸಂತೋಷ್ ಹೇಳಿದರು.
Advertisement
ಸಂಜನಾ, ಐಂದ್ರಿತಾ ಎಲ್ಲರೂ ನನ್ನ ಗೆಳೆಯರು. ಐದು ವರ್ಷದ ಹಿಂದೆ ಸಂಜನಾ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದೆ. ಈ ವೇಳೆ ರಾಹುಲ್ ಸಿಕ್ಕಿದ್ದ. ಆತ ಸೆಲೆಬ್ರಿಟಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್ಬುಕ್ಗೆ ಹಾಕುತ್ತಿದ್ದನು. ಮತ್ತೆ ಯುಬಿ ಸಿಟಿಯಲ್ಲಿ ರಾಹುಲ್ ಬರ್ತ್ ಡೇ ಪಾರ್ಟಿಗೆ ಹೋಗಿದ್ದೆ. ಎರಡು ಪಾರ್ಟಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದೆ. ಈಗ ಅದೇ ಫೋಟೋ ಸಿಕ್ಕಿರುವುದು ಎಂದರು.
ಇನ್ನೂ ವಿಚಾರಣೆಗೆ ಬಂದು ಅಕುಲ್, ಸಿಸಿಬಿ ವಿಚಾರಣೆಗೆ ಕರೆದಿದ್ದಾರೆ. ಹೀಗಾಗಿ ಹೇಳಿದ್ದ ಸಮಯಕ್ಕೆ ಬಂದಿದ್ದೇನೆ. ನನ್ನ ಕಡೆಯಿಂದ ಸಹಕಾರ ಇರುತ್ತೆ. ನಾನು ವೈಭವ್ ಜೈನ್ ಹಾಯ್ ಬಾಯ್ ಫ್ರೆಂಡ್ಸ್ ಅಷ್ಟೇ. ದೊಡ್ಡಬಳ್ಳಾಪುರದಲ್ಲಿ ರೆಸಾರ್ಟ್ ಕೊಟ್ಟಿರುವ ಬಗ್ಗೆ ನಾನು ದಾಖಲೆಗಳೊಂದಿಗೆ ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯ, ಸಿಸಿಬಿಗೆ ನನ್ನ ಸಾಥ್ ಇದೆ. ವಿಚಾರಣೆಗೆ ನಾನು ಸ್ಪಂದಿಸಲಿದ್ದೇನೆ ಎಂದರು. ಪ್ರತೀಕ್ ಶೆಟ್ಟಿ ಪರಿಚಯವೇ ಎಂಬ ಪ್ರಶ್ನೆಗೆ ಸ್ಪಷ್ಟನೆ, ಆತ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಅಕುಲ್ ಸ್ಪಷ್ಟಪಡಿಸಿದರು.
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿದಂತೆ ವಿಚಾರಣೆಗೆ ಹಾಜರಾಗುವಂತೆ ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ಇಂದು ಇಬ್ಬರೂ ಸಿಸಿಬಿ ಕಚೇರಿಗೆ ಹಾಜರಾಗಿದ್ದು, ಸಿಸಿಬಿ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.