ನವದೆಹಲಿ: ಒಬಿಸಿ, ಇಡಬ್ಲ್ಯೂಎಸ್ (ಆರ್ಥಿಕ ಹಿಂದುಳಿದ ವರ್ಗ) ವರ್ಗಗಳಿಗೆ ಮೆಡಿಕಲ್ ಮತ್ತು ಡೆಂಟಲ್ ಕಾಲೇಜ್ಗಳಲ್ಲೂ ಮೀಸಲಾತಿ ನೀಡೋದಾಗಿ ಕೇಂದ್ರ ಪ್ರಕಟಿಸಿದೆ. ಒಬಿಸಿಗೆ ಶೇ.27, ಇಬಿಸಿಗೆ ಶೇ.10ರಷ್ಟು ಮೀಸಲಾತಿ ಕೋಟಾ ಪ್ರಸ್ತುತ ವರ್ಷದಿಂದಲೇ ಜಾರಿಗೆ ಬರುತ್ತೆ. ಸಾವಿರಾರು ಯುವಜನತೆಗೆ ಅನುಕೂಲತೆಯೊಂದಿಗೆ ಸಾಮಾಜಿಕ ನ್ಯಾಯ ಸಿಗಲಿದೆ ಅಂತ ಮೋದಿ ಟ್ವೀಟ್ ಮಾಡಿದ್ದಾರೆ.
ಪದವಿ ಪೂರ್ವ ಮತ್ತು ಸ್ನಾತಕೋತ್ತರ ಪದವಿಗಳಾದ ಎಂಬಿಬಿಎಸ್/ಎಂಡಿ/ಎಂಎಸ್/ಡಿಪ್ಲೋಮಾ/ಬಿಡಿಎಸ್/ಎಂಡಿಎಸ್ ಕೋರ್ಸ್ ಗೆ ಇದು ಅನ್ವಯ ಆಗಲಿದೆ. ಇದರಿಂದ 5,550 ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಅನುಕೂಲವಾಗಲಿದೆ ಅಂತ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ. ಎಂಬಿಬಿಎಸ್ ನಲ್ಲಿ 1,500 ಮತ್ತು ಸ್ನಾತಕೋತ್ತರ ಪದವಿಯಲ್ಲಿ 2,500 ಒಬಿಸಿ ವಿದ್ಯಾರ್ಥಿಗಳು ಸೀಟು ಪಡೆದುಕೊಳ್ಳಬಹುದಾಗಿದೆ. ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ನಲ್ಲಿ ಸುಮಾರು 550 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಸುಮಾರು 1,000 ಸೀಟುಗಳು ಲಭ್ಯವಾಗಲಿವೆ.
Advertisement
Our Government has taken a landmark decision for providing 27% reservation for OBCs and 10% reservation for Economically Weaker Section in the All India Quota Scheme for undergraduate and postgraduate medical/dental courses from the current academic year. https://t.co/gv2EygCZ7N
— Narendra Modi (@narendramodi) July 29, 2021
Advertisement
ಈ ಮಧ್ಯೆ, ರಾಷ್ಟ್ರೀಯ ಶಿಕ್ಷಣ ನೀತಿಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನೀತಿ ನಿರೂಪಕರು, ವಿದ್ಯಾರ್ಥಿಗಳು, ಶಿಕ್ಷಕರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ರು. ನವ ಭಾರತಕ್ಕೆ ಹೊಸ ಶಿಕ್ಷಣ ನೀತಿಯ ಅಗತ್ಯ ಇದೆ ಅಂತ ಹೇಳಿದದರು. ಇದನ್ನೂ ಓದಿ: 75 ವರ್ಷ, 75 ಗ್ರಾಮ, 75 ಗಂಟೆ – ಆಗಸ್ಟ್ 15ಕ್ಕೆ ಸಂಸದರಿಗೆ ಮೋದಿ ಟಾಸ್ಕ್
Advertisement
देश में मेडिकल एजुकेशन के क्षेत्र में सरकार द्वारा ऐतिहासिक निर्णय लिया गया है।
ऑल इंडिया कोटे के तहत अंडरग्रेजुएट/पोस्ट ग्रेजुएट, मेडिकल तथा डेंटल शिक्षा में OBC वर्ग के छात्रों को 27% व कमजोर आय वर्ग (EWS) के छात्रों को 10% आरक्षण दिया जाएगा। (1/2)
— Dr Mansukh Mandaviya (@mansukhmandviya) July 29, 2021
Advertisement
ಇದೇ ವೇಳೆ ಶಿಕ್ಷಣ ನೀತಿಯ ಸಾಕ್ಷ್ಯಾಚಿತ್ರ ಬಿಡುಗಡೆ ಮಾಡಲಾಯಿತು. ಹೊಸ ಶಿಕ್ಷಣ ನೀತಿ ಜಾರಿಯಲ್ಲಿ ಇಲ್ಲಿಯವರೆಗೆ ಆಗಿರುವ ಪ್ರಗತಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯ್ತು. ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ ಬಹು ಹಂತದ ಪ್ರವೇಶ ನಿರ್ಗಮನದ ಆಯ್ಕೆಗಳನ್ನು ಒದಗಿಸುವ ಅಕ್ಯಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಗೆ ಚಾಲನೆ ನೀಡಿದ್ರು. ಮೊದಲ ವರ್ಷದ ಪ್ರಾದೇಶಿಕ ಭಾಷೆಯ ಎಂಜಿನಿಯರಿಂಗ್ ಕಾರ್ಯಕ್ರಮಗಳು, ಉನ್ನತ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಕ್ಷೇತ್ರದ ಮಾರ್ಗಸೂಚಿಗಳನ್ನು ಕೂಡ ಪ್ರಕಟಿಸಲಾಯ್ತು. ಇದನ್ನೂ ಓದಿ: ಗಡ್ಡ ಬಿಟ್ಟಾಗ ಶಿವಾಜಿ, ಈಗ ಬಸವಣ್ಣ: ಶಾಸಕ ಯತ್ನಾಳ್