ನವದೆಹಲಿ/ಬೆಂಗಳೂರು: ಕೊರೊನಾ ಕಾಡ್ಗಿಚ್ಚಿನಲ್ಲಿ ಬೇಯುತ್ತಿರುವ ಭಾರತಕ್ಕೆ ಹೊಸ ಅಪಾಯ ಎದುರಾಗಿದೆ. ದೇಶದಲ್ಲಿ ಹೊಸ ರೂಪಾಂತರಿ ಕೊರೋನಾ ವೈರಸ್ ಕಂಡು ಬಂದಿದೆ.
ಮಹಾರಾಷ್ಟ್ರ, ಬಂಗಾಳ, ದೆಹಲಿ, ಛತ್ತೀಸ್ಘಡದಲ್ಲಿ ಕಂಡು ಬಂದಿರುವ ಟ್ರಿಪಲ್ ಮ್ಯೂಟೆಂಟ್ ವೈರಸ್ಗೆ ‘ಬೆಂಗಾಲ್ ಕೊರೊನಾ’ ಎಂದು ಹೆಸರಿಡಲಾಗಿದೆ. ಬೇರೆ ಬೇರೆ ದೇಶಗಳಲ್ಲಿ ಎರಡನೇ ಅಲೆಯ ಸ್ವಭಾವ ಒಂದು ರೀತಿಯಿದ್ದರೆ, ನಮ್ಮಲ್ಲಿ ಮಾತ್ರ ಭಿನ್ನವಾಗಿದೆ. ರೂಪಾಂತರಿ ತಳಿಯ ವರ್ತನೆ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ.
Advertisement
Advertisement
ಈ ಹೊಸ ತಳಿಯ ಕೊರೋನಾ ಕಳೆದ ಅಕ್ಟೋಬರ್ ನಲ್ಲೇ ಕಂಡುಬಂದಿದ್ದು, ಇದಕ್ಕೆ ಬಿ.1.617 ಅಂತಾ ಹೆಸರಿಡಲಾಗಿದೆ. ಇದರ ವರ್ತನೆ ಹೇಗಿದೆ ಅಂದ್ರೆ, ಆರ್ ಟಿಪಿಸಿಆರ್ ಪರೀಕ್ಷೆಯಲ್ಲೂ ಸೋಂಕು ಪತ್ತೆ ಆಗ್ತಿಲ್ಲ. ಅತಿಸಾರ, ಹೊಟ್ಟೆನೋವು, ಮಾನಸಿಕ ಗೊಂದಲ, ಮಂಕು ಕವಿಯುವುದು ಕೂಡ ಸೋಂಕು ಲಕ್ಷಣ ಎನ್ನಲಾಗಿದೆ. ಇದು ಒಂಥರಾ ಚದುರಂಗದ ಆಟದ ರೀತಿ ಆಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ
Advertisement
ಭಾರತದಲ್ಲಿ ಅತ್ಯಂತ ಘನಘೋರ ಸ್ಥಿತಿ ಇದೆ ಎಂದು ಅಮೆರಿಕದ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಹೇಳಿದ್ದಾರೆ. ಭಾರತದ ಕೊರೋನಾ ವೈರಸ್ ಲಕ್ಷಣಗಳೇನು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಇದನ್ನು ತಡೆಯುವ ಸಾಮರ್ಥ್ಯ ಲಸಿಕೆಗಳಿಗೆ ಇದ್ಯಾ ಇಲ್ವಾ ಅನ್ನೋದು ಇನ್ನೂ ಗೊತ್ತಾಗಿಲ್ಲ ಎಂದಿದ್ದಾರೆ.