ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಬಿಜೆಪಿ ಕಾರ್ಯಕ್ರಮದ ಫೋಟೋ ಹಂಚಿಕೊಂಡು ಕಮಲ ನಾಯಕರ ಕಾಲೆಳೆದಿದ್ದಾರೆ. ಫೋಟೋ ಹಂಚಿಕೊಂಡಿರುವ ಶಶಿ ತರೂರ್, ಇದು ಬಿಜೆಪಿ ಪಾರ್ಟಿಯ ಅಂತ್ಯ ಎಂದು ಬರೆದುಕೊಂಡಿದ್ದಾರೆ.
Advertisement
ಫೋಟೋದಲ್ಲಿ ಬಿಜೆಪಿ ಕಾರ್ಯಕ್ರಮ ಆಯೋಜಿಸಿದ್ದು ಕಾಣಿಸುತ್ತಿದ್ದು, ವೇದಿಕೆಯ ಮೇಲೆ ಐವರು ನಾಯಕರು ಆಸೀನರಾಗಿದ್ದಾರೆ. ಕಾರ್ಯಕ್ರಮದ ಬ್ಯಾನರ್ ನಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಏಳು ನಾಯಕರ ಫೋಟೋ ಹಾಕಲಾಗಿದೆ. ವೇದಿಕೆ ಮುಂಭಾಗ ಹಾಕಲಾಗಿರುವ ಕುರ್ಚಿಯಲ್ಲಿ ಓರ್ವ ವ್ಯಕ್ತಿ ಮಾತ್ರ ಕುಳಿತಿರೋದನ್ನ ಕಾಣಬಹುದಾಗಿದೆ. ಇದೇ ಫೋಟೋ ಹಂಚಿಕೊಂಡಿರುವ ಶಶಿ ತರೂರ್, ಬಿಜೆಪಿಯನ್ನ ವ್ಯಂಗ್ತ ಮಾಡಿದ್ದಾರೆ.
Advertisement
Five people on stage. Pictures of seven leaders. One man in the audience. And it’s not even Kerala! #BJPThePartyIsOver pic.twitter.com/f2FCgeHWIi
— Shashi Tharoor (@ShashiTharoor) February 20, 2021
Advertisement
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಶಶಿ ತರೂರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಯೋಗ ಗುರು ಬಾಬಾ ರಾಮದೇವ ಅವರ ಶೀರ್ಷಾಸನದ ಕಾರ್ಟೂನ್ ಹಂಚಿಕೊಂಡಿದ್ದರು.
Advertisement
— Shashi Tharoor (@ShashiTharoor) February 19, 2021