– 1,900 ಅಡಿ ಎತ್ತರದ ಬಂಡೆಯ ತುತ್ತ ತುದಿಯಲ್ಲಿ ಫೋಟೋ ಕ್ಲಿಕ್
ವಾಷಿಂಗ್ಟನ್: ಇತ್ತೀಚೆಗೆ ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಆಗಿದೆ. ವಧು-ವರ ಇಬ್ಬರೂ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇದೀಗ ವಧುಯೊಬ್ಬಳು ಸುಮಾರು 1,900 ಅಡಿ ಎತ್ತರದ ಬಂಡೆಯ ಅಂಚಿನಲ್ಲಿ ತೂಗಾಡುವ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಅಮೆರಿಕದ ಅರ್ಕಾನ್ಸಾಸ್ ಮೂಲದ ರಿಯಾನ್ ಮೈಯರ್ಸ್ (30) ಮತ್ತು ಪತ್ನಿ ಸ್ಕೈ (28) ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಲು ಪ್ಲಾನ್ ಮಾಡಿದ್ದರು. ಆದರೆ ಕೊರೊನಾ ಹಿನ್ನೆಲೆ ಲಾಕ್ಡೌನ್ ನಿರ್ಬಂಧಗಳಿಂದಾಗಿ ಅದು ಸಾಧ್ಯವಾಗಿಲ್ಲ. ಕೊನೆಗೆ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
Advertisement
Advertisement
ಅದ್ಧೂರಿಯಾಗಿ ಮದುವೆಯಾಗದಿದ್ದರೂ ಸಾಹಸಮಯವಾಗಿ ಫೋಟೋಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿದರು. ಅದರಂತೆಯೇ ದಂಪತಿ ಅರ್ಕಾನ್ಸಾಸ್ನ ಅತ್ಯಂತ ಜನಪ್ರಿಯ ಟ್ರಕ್ಕಿಂಗ್ ಸ್ಥಳವಾದ ವಿಟೇಕರ್ ಪಾಯಿಂಟ್ನಲ್ಲಿರುವ ಹಾಕ್ಸ್ ಬಿಲ್ ಕ್ರಾಗ್ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿದರು. ಛಾಯಾಗ್ರಾಹಕ ಮಾಸನ್ ಗಾರ್ಡನರ್ ಎಂಬುವರು ರೋಮಾಂಚನಕಾರಿ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಅದರಲ್ಲಿ ಬಂಡೆಯ ತುದಿಯಲ್ಲಿ ನವವಿವಾಹಿತರು ಕೈ ಹಿಡಿದು ನಿಂತಿರುವುದನ್ನು ನೋಡಬಹುದಾಗಿದೆ.
Advertisement
Advertisement
ಪರ್ವತದ ತುತ್ತ ತುದಿಯಲ್ಲಿ ವಧುವಿನ ಕೈಯನ್ನು ವರ ಹಿಡಿದಿದ್ದಾನೆ. ವಧು ತೂಗಾಡುವಂತಿದ್ದು, ವರನ ಕೈಯಿಂದ ಜಾರಿ ವಧು ಪ್ರಪಾತಕ್ಕೆ ಬೀಳುವಂತೆ ಕಾಣಿಸುತ್ತದೆ. ಆದರೆ ವಧುವಿನ ಸುರಕ್ಷತೆಗಾಗಿ ರೋಪ್ ಬಳಸಿರುವುದನ್ನು ಮತ್ತೊಂದು ಫೋಟೋದಲ್ಲಿ ಕಾಣಿಸುತ್ತಿದೆ. ಛಾಯಾಗ್ರಾಹಕರು ಸಾಕಷ್ಟು ಸಾಹಸಮಯ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ.
ಈ ದಂಪತಿಗೆ ಕೇವಲ 12 ಅತಿಥಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ನಂತರ ಈ ದಂಪತಿ ಸಾಹಸಮಯ ಫೋಟೋಶೂಟ್ ಮಾಡಿಸಿದ್ದಾರೆ.
ನಾವು ಅದ್ಧೂರಿಯಾಗಿ ಮದುವೆಯಾಗಬೇಕೆಂದು ಬಯಸಿದ್ದೆವು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ವಿಭಿನ್ನವಾಗಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದೇವೆ. ನಮಗೆ ಪ್ರಕೃತಿಯ ಮಧ್ಯೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ತುಂಬಾ ಇಷ್ಟ. ಆದ್ದರಿಂದ ಫೋಟೋಶೂಟ್ ವೇಳೆ ಎಲ್ಲಾ ಸುರಕ್ಷತಾ ಸಾಧನಗಳನ್ನು ತಜ್ಞರು ಪರಿಶೀಲಿಸಿದ ನಂತರ ಫೋಟೋಶೂಟ್ ಮಾಡಿಸಿದ್ದೇವೆ. ಇದರ ಅನುಭವ ಅದ್ಭುತವಾಗಿತ್ತು ಎಂದು ದಂಪತಿ ಸಂತಸದಿಂದ ಹೇಳಿದ್ದಾರೆ.