– ಮಗನ ಮೇಲೆಯೂ ಕೊಡಲಿಯಿಂದ ಹಲ್ಲೆ
ಲಕ್ನೋ: ಪೊಲೀಸರಿಗೆ ದೂರು ನೀಡಿದ್ದಕ್ಕೆ 65 ವರ್ಷದ ದಲಿತ ವೃದ್ಧನ ಮೇಲೆ ಹಲ್ಲೆಗೈದು, ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದ ಘಟನೆ ಉತ್ತರಪ್ರದೇಶದ ಲಲಿತಪುರ ಗ್ರಾಮದ ರೊಡಾ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ಸೋನು ಯಾದವ್ ಎಂದು ಗುರುತಿಸಲಾಗಿದೆ. ಈತ ಕೆಲ ದಿನಗಳ ಹಿಂದೆ ವೃದ್ಧನ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದನು. ಹೀಗಾಗಿ ತಂದೆ- ಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೋನು ವಿರುದ್ಧ ದೂರು ದಾಖಲಿಸಿದ್ದರು.
Advertisement
Lalitpur: A 65-yr-old Dalit man was allegedly beaten & forced to drink urine in Village Roda by a person against whom victim's family had filed a police complaint a week ago.
Accused was forcing the old man & his son to compromise & take back the police complaint.
(12.10.2020) pic.twitter.com/kk16CeqbwA
— ANI UP/Uttarakhand (@ANINewsUP) October 13, 2020
Advertisement
ಇತ್ತ ತನ್ನ ಮೇಲೆ ದೂರು ದಾಖಲಾಗುತ್ತಿದ್ದಂತೆಯೇ ಸೋನು, ಇದನ್ನು ಇಲ್ಲಿಯೇ ನಿಲ್ಲಿಸುವಂತೆ ಹೇಳಿದ್ದಾನೆ. ಅಲ್ಲದೆ ಕೇಸ್ ಹಿಂಪಡೆದುಕೊಳ್ಳುವಂತೆ ಪೀಡಿಸಲು ಆರಂಭಿಸಿದ್ದಾನೆ. ವೃದ್ಧ ಅಮರ್ ಹಾಗೂ ಮಗನನ್ನು ಮಂಗಳವಾರ ಮೂತ್ರ ಕುಡಿಯುವಂತೆ ಸೋನು ಒತ್ತಾಯಿಸಿದ್ದಾನೆ.
Advertisement
ಸೋನು ಮೂತ್ರ ಕುಡಿಯುವಂತೆ ಒತ್ತಾಯಿಸಿದಾಗ ನಾನು ನಿರಾಕರಿಸಿದೆ. ಈ ವೇಳೆ ಆತ ನನ್ನ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ಕೆಲ ದಿನಗಳ ಹಿಂದೆ ನನ್ನ ಮಗನ ಮೇಲೆಯೂ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ಸೋನು ವಿರುದ್ಧ ನಾವು ಪೊಲೀಸರಿಗೆ ದೂರು ನೀಡಿದ್ದೆವು. ಈ ಹಿನ್ನೆಲೆಯಲ್ಲಿ ಆತ ನಮ್ಮೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಾಯಿಸಿರುವುದಾಗಿ ಅಮರ್ ತಿಳಿಸಿದ್ದಾರೆ.
Advertisement
A person called Sonu Yadav was forcing me to drink his urine, filled in a cup. When I refused, he attacked me with a stick. He had attacked my son with an axe, few days ago & we had complained against him to police. So he was forcing us to compromise: Amar, Roda village resident https://t.co/WXP49NC0Pa pic.twitter.com/RLSwXFypbF
— ANI UP/Uttarakhand (@ANINewsUP) October 13, 2020
ಈ ಸಂಬಂಧ ಲಲಿತಪುರ ಎಸ್ಪಿ ಮಿರ್ಜಾ ಮನ್ಸಾರ್ ಬೇಗ್ ಮಾತನಾಡಿ, ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ರೋಡಾ ಗ್ರಾಮದಲ್ಲಿ ಇಬ್ಬರು ಗ್ರಾಮಸ್ಥರ ಮೇಲೆ ಪ್ರಭಾವಿಗಳು ಹಲ್ಲೆ ಮಾಡಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಪ್ರಮುಖ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಸಂಬಂಧ ಯಾರ ಬೆದರಿಕೆಗೂ ಜಗ್ಗಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.
Few influential people thrashed 2 villagers in Roda village. Police registered an FIR as soon as it was informed. Main accused has been arrested & search is on for others involved in this case. We won't tolerate any sort of bullying: Mirza Manzar Beg, SP, Lalitpur, Uttar Pradesh https://t.co/Nz4CfImvFp pic.twitter.com/4WyfBjaukm
— ANI UP/Uttarakhand (@ANINewsUP) October 13, 2020