-ಬ್ರಿಗೇಡ್, ಎಂಜಿ ರೋಡ್ ಖಾಲಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಿಲ್ಲರ್ ಕೊರೋನಾ ಉಗ್ರ ತಾಂಡವಾಡ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇಂದು ವಿಕೇಂಡ್ ಇದ್ರೂ ಜನ ಮಾಲ್, ಹೋಟೆಲ್ ಗಳಿಗೆ ಬರಲು ಹಿಂದೇಟು ಹಾಕುವ ಮೂಲಕ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಕೈ ಮೀರುತ್ತಿರುವ ಹಿನ್ನೆಲೆ ಜನರಲ್ಲಿ ಭಯ ಆವರಿಸಿಕೊಂಡಿದೆ. ಅನ್ಲಾಕ್ ಆಗಿ, ಹೋಟೆಲ್, ಮಾಲ್, ಪಾರ್ಕ್ ಗಳು ಓಪನ್ ಆಗಿದ್ರು ಜನ ಮಾತ್ರ ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗೊ ಹೋಟೆಲ್, ಮಾಲ್ ಗಳು ಖಾಲಿ ಖಾಲಿಯಾಗಿದ್ದವು. ಇನ್ನೂ ಎಂಜಿ ರೋಡ್, ಬ್ರಿಗೇಡ್ ರೋಡ್ ಗಳು ಕೂಡ ಸೈಲೆಂಟ್ ಮೂಡ್ ನಲ್ಲಿರುವ ದೃಶ್ಯಗಳು ಇಂದು ಕಂಡು ಬಂದಿವೆ. ಜನರ ಓಡಾಟ, ವಾಹನಗಳ ಸಂಚಾರ ಸಾಮಾನ್ಯ ದಿನಗಳಿಗಿಂತ ಕಡಿಮೆಯಿತ್ತು.
Advertisement
Advertisement
ಕ್ಷಣ ಕ್ಷಣಕ್ಕೂ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಇಷ್ಟು ದಿನ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ವೈರಸ್ ಇದೀಗ ಬೆಂಗಳೂರಿನ 23 ವರ್ಷದ ಯುವಕನನ್ನ ಬಲಿ ತೆಗದುಕೊಂಡಿದೆ. ಇಂದು ಬೆಂಗಳೂರಿನಲ್ಲಿ ಒಟ್ಟ 31 ಪ್ರಕರಣಗಳು ಬೆಳಕಿಗೆ ಬಂದಿವೆ.