– ಗೋರಖ್ಪುರವನ್ನು ಹಿಂದಿಕ್ಕಲಿದೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸದ್ಯದಲ್ಲೇ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈಗಿರುವ ಒಂದನೇ ಪ್ಲಾಟ್ ಫಾರ್ಮ್ 550 ಮೀಟರ್ ಉದ್ದವಿದ್ದು, ಅದನ್ನು 1,400 ಮೀಟರ್ಗೆ ಹೆಚ್ಚಿಸಲಾಗುತ್ತಿದ್ದು, ಹತ್ತು ಮೀಟರ್ ಅಗಲವಿರುತ್ತದೆ. ಈಗಿನ ತಪಾಸಣಾ ಕ್ಯಾರೇಜ್ ಮಾರ್ಗವನ್ನು ಪೂರ್ಣ ಪ್ಲಾಟ್ ಫಾರ್ಮ್ ಆಗಿ ಪರಿವರ್ತಿಸಲಾಗುತ್ತಿದೆ. ಈಗಾಗಲೇ ಕೆಲಸ ಆರಂಭವಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
Advertisement
Indian Railways, like India, holds the distinction of being home to many World records, such as World’s oldest serving locomotive (Fairy Queen) World’s biggest Route Relay Interlocking (New Delhi) etc.
One more such record is that of longest platform#India #DoYouKnow #DidYouKnow pic.twitter.com/m2JFsU7z0o
— SouthWestern Railway (@SWRRLY) June 2, 2020
Advertisement
ಈಶಾನ್ಯ ರೈಲ್ವೆಯ ಪ್ರಧಾನ ಕಚೇರಿ ಹೊಂದಿರುವ ಉತ್ತರ ಪ್ರದೇಶದ ಗೋರಖ್ಪುರದಲ್ಲಿ 1,366 ಮೀಟರ್ ಉದ್ದದ ಪ್ಲಾಟ್ ಫಾರ್ಮ್ ಇದ್ದು, ಇದು ಸದ್ಯಕ್ಕೆ ವಿಶ್ವದ ಅತಿ ಉದ್ದದ ಪ್ಲಾಟ್ ಫಾರ್ಮ್ ಎನ್ನುವ ಹೆಗ್ಗಳಿಕೆ ಹೊಂದಿದೆ. ಇದನ್ನೂ ಮೀರಿಸುವ ಉದ್ದನೆಯ ಪ್ಲಾಟ್ ಫಾರ್ಮ್ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ.
Advertisement
ಹುಬ್ಬಳ್ಳಿ, ಬೆಂಗಳೂರು ಜೋಡಿ ರೈಲು ಮಾರ್ಗ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾರ್ಯ ಪೂರ್ಣಗೊಳಿಸುವ ಜೊತೆಗೆ ಹುಬ್ಬಳ್ಳಿ ನಿಲ್ದಾಣದಲ್ಲಿ ಒಟ್ಟು ಪ್ಲಾಟ್ಫಾರ್ಮ್ಗಳ ಸಂಖ್ಯೆಯನ್ನು 5ರಿಂದ 8ಕ್ಕೆ ಹೆಚ್ಚಿಸಲಾಗುತ್ತಿದೆ. ಗದಗ ರಸ್ತೆಯಲ್ಲಿ ಹೊಸದಾಗಿ ಇನ್ನೊಂದು ಪ್ರವೇಶ ದ್ವಾರ ಆರಂಭಿಸಲಾಗುತ್ತಿದೆ. ಫ್ಲಾಟ್ ಫಾರ್ಮ್ ನಿರ್ಮಾಣ, ಸಿಗ್ನಲ್, ವಿದ್ಯುತ್ ಸೇರಿದಂತೆ ಈ ಯೋಜನೆಗೆ ಒಟ್ಟು 90 ಕೋಟಿ ರೂ. ವೆಚ್ಚವಾಗಲಿದೆ. ಒಟ್ಟಿನಲ್ಲಿ ರೈಲು ನಿಲ್ದಾಣದಿಂದ ವಾಣಿಜ್ಯ ನಗರಿಗೆ ಮತ್ತೊಂದು ಗರಿ ಬಂದಂತಾಗಿದೆ.