ಕ್ಯಾಲಿಫೋರ್ನಿಯಾ: ಗುಣಮಟ್ಟದ ಐಫೋನ್ ತಯಾರಿಸಿ ಸ್ಮಾರ್ಟ್ಫೋನ್ ಪ್ರಿಯರ ಮನಗೆದ್ದಿರುವ ಆಪಲ್ ಕಂಪನಿ ಈಗ ಅಟೋಮೊಬೈಲ್ ಕ್ಷೇತ್ರಕ್ಕೂ ಕಾಲಿಡಲು ಮುಂದಾಗುತ್ತಿದ್ದು, 2024ರ ವೇಳೆಗೆ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಮುಂದಿನ ತಲೆಮಾರಿನ ವಿಶೇಷ ಬ್ಯಾಟರಿ ತಂತ್ರಜ್ಞಾನದೊಂದಿಗೆ ಈ ಕಾರನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ವರದಿಯಾಗಿದೆ.
Advertisement
ಪ್ರಾಜೆಕ್ಟ್ ಟೈಟಾನ್ ಹೆಸರಿನಲ್ಲಿ ಆಪಲ್ ಕಾರು ನಿರ್ಮಾಣಕ್ಕೆ ಕೈ ಹಾಕಿದೆ. ಈ ಮೊದಲು ಬಾಬ್ ಮ್ಯಾನ್ಸ್ಫೀಲ್ಡ್ ಅವರು ಈ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಗೂಗಲ್ ಕಂಪನಿಯಿಂದ ಬಂದಿರುವ ಜಾನ್ ಜಿಯಾನೆಡ್ರಿಯಾ ಕೈಗೆ ಯೋಜನೆ ಹಸ್ತಾಂತರವಾಗಿದೆ. ಈ ಹಿಂದೆ ಜಾನ್ ಗೂಗಲ್ ಸರ್ಚ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು.
Advertisement
Advertisement
Advertisement
ಆಪಲ್ ಸಿಇಒ ಟಿಮ್ ಕುಕ್ ಅವರು ಈ ಹಿಂದೆಯೇ ಕಾರು ಬಗ್ಗೆ ಪ್ರಸ್ತಾಪಿಸಿದ್ದರು. 2014ರಲ್ಲಿ ಯೋಜನೆ ಆರಂಭವಾಗಿತ್ತು. ಆದರೆ ನಿರೀಕ್ಷಿತ ಪ್ರಗತಿ ಕಂಡು ಬರಲಿಲ್ಲ. ಆಪಲ್ ಈಗ ಫಾಕ್ಸ್ಕಾನ್, ವಿಸ್ಟ್ರಾನ್ ಕಂಪನಿಗಳ ಜೊತೆ ಸೇರಿ ಹೇಗೆ ಐಫೋನ್ಗಳನ್ನು ತಯಾರಿಸುತ್ತದೋ ಅದೇ ರೀತಿಯಾಗಿ ಕಾರು ಉತ್ಪದನಾ ಕಂಪನಿಗಳ ಜೊತೆ ಸೇರಿ ಕಾರುಗಳನ್ನು ತಯಾರಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ಈಗಿನ ಎಲೆಕ್ಟ್ರಿಕ್ ಕಾರುಗಳಲ್ಲಿ ಬ್ಯಾಟರಿ ಚಾರ್ಜಿಂಗ್ ಮಾಡುವುದೇ ಬಹಳ ಸವಾಲಿನ ಕೆಲಸ. ಚಾರ್ಜಿಂಗ್ ತಡವಾಗುವುದರ ಜೊತೆ ದೀರ್ಘಕಾಲ ಕಾರು ಚಲಸಲು ಬೇಕಾಗಿರುವ ಸಾಮರ್ಥ್ಯ ಈಗ ಇರುವ ಬ್ಯಾಟರಿಗಳಲ್ಲಿ ಇಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಅತ್ಯುನ್ನತ ಗುಣಮಟ್ಟದ ಬ್ಯಾಟರಿಯನ್ನು ಅಭಿವೃದ್ದಿ ಪಡಿಸಲು ಆಪಲ್ ಮುಂದಾಗಿದೆ.