– ಕ್ವಾರಂಟೈನ್ ಕೇಂದ್ರಕ್ಕೆ ನಿಜವಾದ ಪತ್ನಿ ಎಂಟ್ರಿ
ಮುಂಬೈ: ಮಹಿಳಾ ಕಾನ್ಸ್ಟೇಬಲ್ ತಾವು ಸಂಬಂಧ ಹೊಂದಿದ್ದ ವಿವಾಹಿತ ಪುರುಷನೊಂದಿಗೆ ಕ್ವಾರಂಟೈನ್ ಆಗಿದ್ದಾರೆ. ಆದರೆ ಪೇದೆ ಕ್ವಾರಂಟೈನ್ ಆಗುವಾಗ ಆತನನ್ನು ತನ್ನ ಪತಿ ಎಂದು ಸುಳ್ಳು ಹೇಳಿರುವ ವಿಚಾರ ಬಹಿರಂಗವಾಗಿದೆ.
ಮಹಿಳೆ ನಾಗ್ಪುರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಮಹಿಳಾ ಕಾನ್ಸ್ಟೇಬಲ್ ಸಹೋದ್ಯೋಗಿಗೆ ಕೊರೊನಾ ಪಾಸಿಟವ್ ಬಂದಿದೆ. ಹೀಗಾಗಿ ಪಾಸಿಟಿವ್ ಬಂದಿದ್ದ ಸಹೋದ್ಯೋಗಿಗೆ ಪ್ರಾಥಮಿಕ ಸಂಪರ್ಕವಾಗಿದ್ದ ಕಾರಣ ಮಹಿಳಾ ಕಾನ್ಸ್ಟೇಬಲ್ ಅನ್ನು ಕ್ವಾರಂಟೈನ್ ಮಾಡಬೇಕಿತ್ತು.
Advertisement
Advertisement
ಅಧಿಕಾರಿಗಳು ಈ ವಿಚಾರವನ್ನು ಪೇದೆಗೆ ತಿಳಿಸಿದ್ದಾರೆ. ಆಗ ಮಹಿಳಾ ಕಾನ್ಸ್ಟೇಬಲ್, ನನ್ನ ಪತಿ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಜೊತೆ ಅವರನ್ನು ಕ್ವಾರಂಟೈನ್ ಮಾಡಬೇಕು ಎಂದು ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ. ಅದರಂತೆಯೇ ಇಬ್ಬರನ್ನು ಒಟ್ಟಿಗೆ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Advertisement
ಇತ್ತ ಕ್ವಾರಂಟೈನ್ ಆಗಿದ್ದ ವ್ಯಕ್ತಿಯ ನಿಜವಾದ ಪತ್ನಿ ಮೂರು ದಿನನಗಳಾದರೂ ಮನೆಗೆ ಬಂದಿಲ್ಲ ಎಂದು ಆತಂಕಗೊಂಡಿದ್ದರು. ನಂತರ ಪತಿ ಮಹಿಳಾ ಕಾನ್ಸ್ಟೇಬಲ್ ಜೊತೆ ಕ್ವಾರಂಟೈನ್ ಆಗಿರುವ ವಿಚಾರವನ್ನು ತಿಳಿದುಕೊಂಡಿದ್ದಾರೆ. ಕೂಡಲೇ ಕ್ವಾರಂಟೈನ್ ಕೇಂದ್ರಕ್ಕೆ ವ್ಯಕ್ತಿಯ ಪತ್ನಿ ಬಂದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಕ್ವಾರಂಟೈನ್ ಸೆಂಟರ್ಗೆ ಬಿಟ್ಟಿಲ್ಲ. ನಂತರ ಆಕೆ ಪತಿ ವಿರುದ್ಧ ಬಜಾಜ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಪೊಲೀಸ್ ಆಯುಕ್ತ ಡಾ.ಭೂಷಣ್ಕುಮಾರ್ ಉಪಾಧ್ಯಾಯ ಅವರನ್ನು ಭೇಟಿಯಾಗಿದ್ದಾರೆ.
ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸ್ ಆಯುಕ್ತ ಡಾ.ಭೂಷಣ್ಕುಮಾರ್ ಉಪಾಧ್ಯಾಯ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.
ಮಹಿಳಾ ಕಾನ್ಸ್ಟೇಬಲ್ ಮತ್ತು ಪುರುಷ ಕಳೆದ ವರ್ಷ ಸರ್ಕಾರಿ ಯೋಜನೆಯೊಂದರಲ್ಲಿ ಭೇಟಿಯಾಗಿದ್ದರು. ಅಂದಿನಿಂದ ಇಬ್ಬರಿಬ್ಬರು ಸಂಬಂಧ ಹೊಂದಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸದ್ಯಕ್ಕೆ ವ್ಯಕ್ತಿಯನ್ನು ಮತ್ತೊಂದು ಕ್ವಾರಂಟೈನ್ ಕ್ರೇಂದ್ರಕ್ಕೆ ವರ್ಗಾಹಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.