– ನನ್ನ ತಂದೆ ಹೆಸ್ರು ತೀರ್ಥ್ ಸಿಂಗ್, ಆದ್ರೆ ಸಿಎಂ ನಮ್ಮ ತಂದೆ ಅಲ್ಲ
ಡೆಹರಾಡೂನ್: ಉತ್ತರಾಖಂಡ ಸಿಎಂ ತೀರ್ಥ್ ಸಿಂಗ್ ರಾವತ್ ತಮ್ಮ ವಿವಾದತ್ಮಕ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದ್ರೂ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಮತ್ತೊಂದು ನಟಿ ಚಿತ್ರಾಶಿ ರಾವತ್ ಹರಿದ ಜೀನ್ಸ್ ಧರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
ಮಹಿಳೆಯರು ಜೀನ್ಸ್ ಧರಿಸೋದಕ್ಕೆ ನನ್ನ ವಿರೋಧವಿಲ್ಲ. ಆದ್ರೆ ಹರಿದ ಜೀನ್ಸ್ ಧರಿಸೋದು ಒಳ್ಳೆಯದಲ್ಲ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಇಂದು ಮಕ್ಕಳು ದುಬಾರಿ ಜೀನ್ಸ್ ಗಳನ್ನ ತಂದೆ ಮನೆಯಲ್ಲಿ ಕತ್ತರಿಸಿ ಧರಿಸುತ್ತಾರೆ. ಈ ಶೈಲಿ ಮನೆಯ ವಾತಾವರಣದ ಮೇಲೆ ಪ್ರಭಾವ ಬೀರಲಿದೆ. ನಾವು ಚಿಕ್ಕವರಿದ್ದಾಗ ನಮ್ಮ ಪ್ಯಾಂಟುಗಳ ಹರಿದಿದ್ದರೆ ಶಿಕ್ಷಕಕರು ಗದರಿಸುತ್ತಿದ್ರು. ನಾವು ಹರಿದ ಪ್ಯಾಂಟ್ ಗೆ ತೇಪೆ ಹಚ್ಚಿಕೊಂಡು ಹೋಗಿದ್ದೇವೆ ಎಂದು ಸಿಎಂ ರಾವತ್ ಹೇಳಿದ್ದಾರೆ.
Advertisement
Advertisement
ಚಿತ್ರಾಶಿ ಫೋಟೋ ವೈರಲ್: ಇತ್ತ ಸಿಎಂ ಹೇಳಿಕೆಗೆ ಆಕ್ರೋಶವಾಗುತ್ತಿದ್ದಂತೆ ಅವರ ನಟಿ ಚಿತ್ರಾಶಿ ರಾವತ್ ರಿಪ್ಪಡ್ ಜೀನ್ಸ್ ಧರಿಸಿದ ಫೋಟೋಗಳು ವೈರಲ್ ಆಗಿವೆ. ತಮ್ಮ ಫೋಟೋಗಳು ವೈರಲ್ ಆಗುತ್ತಿದ್ದಂತೆ ಚಿತ್ರಾಶಿ ರಾವತ್ ಸ್ಪಷ್ಟನೆ ನೀಡಿದ್ದಾರೆ. ಜನರು ನನ್ನನ್ನು ಸಿಎಂ ಪುತ್ರಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ನಮ್ಮ ತಂದೆಯ ಹೆಸರು ಮತ್ತು ಸಿಎಂ ಹೆಸರು ಒಂದೇ. ಹಾಗಾಗಿ ಈ ಗೊಂದಲ ಉಂಟಾಗಿದೆ. ಸಿಎಂ ತೀರ್ಥ್ ಸಿಂಗ್ ರಾವತ್ ನಮ್ಮ ತಂದೆ ಅಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
Advertisement
ಸಿಎಂ ರಾವತ್ ಹೇಳಿದ್ದೇನು?:
ಹರಿದ ಜೀನ್ಸ್ ಧರಿಸುವ ಮಹಿಳೆಯರು ಸಮಾಜಕ್ಕೆ ಏನು ಸಂದೇಶ ನೀಡುತ್ತಾರೆ? ಹರಿದ ಜೀನ್ಸ್ ಧರಿಸುವಿಕೆ ಇದ್ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದ್ದಾರೆ. ಈ ಜೀವನಶೈಲಿ ಪೋಷಕರ ಮೇಲೆ ನಿರ್ಧರಿತವಾಗಿರುತ್ತೆ ಎಂದು ಹೇಳಿದ್ದರು.
ಒಂದು ದಿನ ವಿಮಾನಯಾನ ಮಾಡುವಾಗ ಮಹಿಳೆ ಇಬ್ಬರು ಮಕ್ಕಳ ಜೊತೆ ಬಂದು ಪಕ್ಕದಲ್ಲಿ ಕುಳಿತರು. ಮಹಿಳೆ ಹರಿದ ಜೀನ್ಸ್ ಧರಿಸಿದ್ದರು. ಸೋದರಿ ಎಲ್ಲಿಗೆ ಹೋಗ್ತೀದ್ದೀರಾ ಅಂತ ಕೇಳಿದಾಗ ಮಹಿಳೆ ತಮ್ಮ ಕಿರು ಪರಿಚಯ ಮಾಡಿಕೊಂಡರು. ಪತಿ ಜೆಎನ್ಯುನಲ್ಲಿ ಉಪನ್ಯಾಸಕರಾಗಿದ್ದು, ತಾನು ಎನ್ಜಿಓ ನಡೆಸುತ್ತಿರೋದಾಗಿ ತಿಳಿಸಿದರು. ಹರಿದ ಜೀನ್ಸ್ ಧರಿಸಿದ ಮಹಿಳೆ ಎನ್ಜಿಓ ಮೂಲಕ ಸಮಾಜಕ್ಕೆ ಏನು ಸಂದೇಶ ಕೊಡುತ್ತಾರೆ. ನಮ್ಮ ಶಾಲಾ ದಿನಗಳಲ್ಲಿ ಈ ರೀತಿಯ ಜೀವನ ಶೈಲಿ ಇರಲಿಲ್ಲ.
Oh my God!!! Their knees are showing ???????????? #RippedJeansTwitter pic.twitter.com/wWqDuccZkq
— Priyanka Gandhi Vadra (@priyankagandhi) March 18, 2021
ಹಳೆ ವೀಡಿಯೋ ವೈರಲ್: ನಾನು ಶ್ರೀನಗರದಲ್ಲಿ ಓದುತ್ತಿರುವಾಗ ಚಂಡಿಗಢನಿಂದ ಓರ್ವ ಯುವತಿ ಬಂದಿದ್ದಳು. ಶ್ರೀನಗರದವರೇ ಆಗಿದ್ರೂ ಚಂಡೀಗಢನಿಂದ ಬಂದಿದ್ದರಿಂದ ಯುವತಿಯ ಉಡುಗೆ ಭಿನ್ನವಾಗಿತ್ತು. ಅದಕ್ಕೇ ಏನಂತಾರೆ ಅಂದ್ರೆ ಕಟ್ ಡ್ರೆಸ್ ಅಲ್ವಾ? ನಾವು ಆಕೆಯನ್ನ ಹಾಸ್ಯ ಮಾಡುತ್ತಿದ್ದೇವೆ. ಕಾರಣ ಎಲ್ಲ ಹುಡುಗರು ಆಕೆ ಹಿಂದೆಯೇ ತಿರುಗುತ್ತಿದ್ರು. ಯುನಿವರ್ಸಿಟಿಗೆ ಓದೋದಕ್ಕೆ ಬರೋದಾ ಅಥವಾ ಅಂಗಾಂಗ ಪ್ರದರ್ಶನಕ್ಕೆ ಬರೋದಾ ಎಂದು ತೀರ್ಥ್ ಸಿಂಗ್ ವೀಡಿಯೋದಲ್ಲಿ ಪ್ರಶ್ನೆ ಮಾಡಿದ್ದರು.
ಮುಖ್ಯಮಂತ್ರಿಗಳ ಹೇಳಿಕೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸಂಸದೆ ಜಯಾ ಬಚ್ಚನ್ ಸೇರಿದಂತೆ ಹಲವು ಮಹಿಳಾ ನಾಯಕಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನೂ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಆರ್ಎಸ್ಎಸ್ ಸಮವಸ್ತ್ರದಲ್ಲಿರುವ ಫೋಟೋಗಳನ್ನ ಹಂಚಿಕೊಂಡು, ಇವರ ಮೊಣಕಾಲುಗಳು ಕಾಣುತ್ತಿವೆ ಎಂದು ವ್ಯಂಗ್ಯ ಮಾಡಿದ್ದರು.