ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಮತ್ತೊಂದು ವಿವಾದತ್ಮಾಕ ತೀರ್ಪು ಚರ್ಚೆಗೆ ಕಾರಣವಾಗಿದೆ. ರಾಜಸ್ಥಾನ ರಾಯಲ್ಸ್, ಬೆಂಗಳೂರು ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ಘಟನೆ ನಡೆದಿದೆ.
ಪಂದ್ಯದಲ್ಲಿ 4ನೇ ಓವರಿನ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್ ಬೌಂಡರಿ ಸಿಡಿಸಲು ಮುಂದಾದರು, ಆದರೆ ಈ ವೇಳೆ ಸಂಜು ಬ್ಯಾಟ್ಗೆ ಟಚ್ಆಗಿ ಸಿಡಿದ ಚೆಂಡನ್ನು ಚಹಲ್ ಕ್ಯಾಚ್ ಪಡೆದರು. ಆದರೆ ಚಹಲ್ ಪಡೆದ ಕ್ಯಾಚ್ ಕುರಿತು ಅನುಮಾನ ವ್ಯಕ್ತಪಡಿಸಿದ ಆನ್ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ಗೆ ಮನವಿ ಸಲ್ಲಿಸಿದ್ದರು. ರೀಪ್ಲೇ ಗಮನಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
Advertisement
Advertisement
ಆದರೆ ಮೂರನೇ ಅಂಪೈರ್ ತೀರ್ಪಿನ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಭಿಮಾನಿಗಳು, ಫೀಲ್ಡ್ ಅಂಪೈರ್ ತೀರ್ಪಿಗೆ ಸಹಮತ ವ್ಯಕ್ತಪಡಿಸಿದಕ್ಕೆ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಹಲ್ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ಚೆಂಡು ಭೂಮಿಗೆ ತಾಗಿದೆ ಎಂದು ವಾದ ಮಂಡಿಸಿದ್ದರೆ. ಮತ್ತೆ ಕೆಲ ಅಭಿಮಾನಿಗಳು ಚಹಲ್ ಬೆರಳು ಚೆಂಡಿನ ಕೆಳಭಾಗದಲ್ಲಿ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.
Advertisement
Advertisement
ಪಂದ್ಯದಲ್ಲಿ ಆರ್ಸಿಬಿ ಸ್ಪಿನ್ ಮಾಂತ್ರಿಕ ಚಹಲ್, ವೇಗಿ ಇಸುರು ಉದಾನಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ತಂಡಕ್ಕೆ 155 ರನ್ಗಳ ಟಾರ್ಗೆಟ್ ನೀಡಿದೆ. ಆರ್ ಸಿಬಿ ಪರ ಚಹಲ್ ಪ್ರಮುಖ 3 ವಿಕೆಟ್ ಪಡೆದರೆ, ಉದಾನಾ 2 ಹಾಗೂ ಸೈನಿ 1 ವಿಕೆಟ್ ಪಡೆದರು.
Think 3rd umpire is in hurry and needs to complete the match quickly b4 start of next match.
Donno what he tried to see in butler’s decission and for sanju’s I don’t see any finger underneath the ball and ball hits the ground, but he says no conclusive evidence.#IPL2020
— Harsha Pulikollu???? (@PulikolluHarsha) October 3, 2020
ರಾಜಸ್ಥಾನ ರಾಯಲ್ಸ್ ಪರ ಲೊಮರ್ ಗಳಿಸಿದ ತಾಳ್ಮೆಯ 47 ರನ್ ಹಾಗೂ ಅಂತಿಮ ಸ್ಲಾಗ್ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಆಡಿದ ರಾಹುಲ್ ತೇವಟಿಯಾ ಮತ್ತು ಜೋಫ್ರಾ ಆರ್ಚರ್ ಅವರು, 6ನೇ ವಿಕೆಟ್ಗೆ ಉತ್ತಮ ಜೊತೆಯಾಟವಾಡಿದರು. ಕೊನೆಯ 21 ಬಾಲಿಗೆ ಈ ಜೋಡಿ ಬರೋಬ್ಬರಿ 40 ರನ್ ಚಚ್ಚಿದ್ದು, ರಾಜಸ್ಥಾನ ತಂಡ ಇನ್ನಿಂಗ್ಸ್ ನಲ್ಲಿ ಸ್ಪಧಾತ್ಮಕ ಮೊತ್ತ ದಾಖಲಿಸಲು ಕಾರಣವಾಯ್ತು.
Those who are saying #samson
was not out see this vedio
One of the #chahal finger is under the ball
Clear out #PlayBold pic.twitter.com/13C90LqVJ5
— Chandan Chandan (@Chandan69314853) October 3, 2020