ನವದೆಹಲಿ: ವಿಪಕ್ಷಗಳ ವಿರೋಧ ನಡುವೆ ರಾಜ್ಯಸಭೆಯಲ್ಲಿ ಕೃಷಿಗೆ ಸಂಬಂಧಿಸಿದ ಎರಡು ಮಸೂದೆಗಳು ಪಾಸ್ ಆಗಿದೆ.
ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ, 2020ಕ್ಕೆ ಅಂಗೀಕಾರ ಪಡೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.
Advertisement
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಸದಸ್ಯರು ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
Advertisement
Advertisement
ಮಸೂದೆ ಕುರಿತು ಸೂಕ್ತ ಚರ್ಚೆಗೆ ಆಸ್ಪದ ಕೊಡದೇ ಧ್ವನಿ ಮತಕ್ಕೆ ಆದೇಶ ನೀಡಿದ್ದಕ್ಕೆ ಆಕ್ರೋಶಗೊಂಡ ಟಿಎಂಸಿಯ ಡೆರೆಕ್ ಒ’ಬ್ರಿಯೆನ್ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಕುಳಿತಿದ್ದ ಮೇಜಿನ ಬಳಿ ಆಗಮಿಸಿ ರೂಲ್ ಪುಸ್ತಕವನ್ನೇ ಹರಿದು ಹಾಕಿದ್ದಾರೆ.
Advertisement
ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಸೋಮವಾರ ಬೆಳಿಗ್ಗೆ 9 ಗಂಟೆವರೆಗೆ ಮುಂದೂಡಲಾಗಿದೆ.
Watch | Ruckus in Rajya Sabha over #FarmBills, Derek O'Brien attempts to tear the rulebook pic.twitter.com/cJCopsDMdr
— NDTV (@ndtv) September 20, 2020