– ಕೊಹ್ಲಿಯನ್ನ ರೋಜರ್ ಫೆಡರರ್ಗೆ ಹೋಲಿಸಿದ ಎಬಿ ಡಿವಿಲಿಯರ್ಸ್
ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿವಿಲಿಯರ್ಸ್ ಅವರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟೆನಿಸ್ ಆಟಗಾರ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಅವರಿಗೆ ಹೋಲಿಸಿದ್ದಾರೆ.
ಇನ್ಸ್ಟಾಗ್ರಾಮ್ ಲೈವ್ ಚಾಟಿಂಗ್ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಎಬಿ ಡಿವಿಲಿಯರ್ಸ್, ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಅವರನ್ನು ಸ್ಪ್ಯಾನಿಷ್ ಟೆನಿಸ್ ತಾರೆ ರಾಫೆಲ್ ನಡಾಲ್ ಎಂದು ಡಿವಿಲಿಯರ್ಸ್ ಬಣ್ಣಿಸಿದ್ದಾರೆ. ವಿರಾಟ್ ಕೊಹ್ಲಿ ವಿವಿಧ ದೇಶಗಳ ಕ್ರಿಕೆಟ್ ಮೈದಾನದಲ್ಲಿ ರನ್ ಮಳೆ ಹರಿಸಿದ್ದಾರೆ. ಆದರೆ ಸ್ಮಿತ್ ಮಾನಸಿಕವಾಗಿ ಬಲಶಾಲಿ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
Advertisement
Advertisement
ಎಬಿ ಡಿವಿಲಿಯರ್ಸ್ ಮತ್ತು ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಫ್ರ್ಯಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 9 ವರ್ಷಗಳಿಂದ ಆಡುತ್ತಿದ್ದಾರೆ. ಕೊಹ್ಲಿ ಆರ್ಸಿಬಿಯ ಕ್ಯಾಪ್ಟನ್ ಕೂಡ ಹೌದು. ಈ ಜೋಡಿ ಮೈದಾನದಲ್ಲಿ ಉತ್ತಮ ಬ್ಯಾಟಿಂಗ್ ಪ್ರರ್ದಶನ ನೀಡಿದ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದ್ದು ಉಂಟು.
Advertisement
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದರೆ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇತ್ತ ಟೆನಿಸ್ ಆಟಗಾರರಾದ ಫೆಡರರ್ 20 ಮತ್ತು ನಡಾಲ್ 19 ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದಿದ್ದಾರೆ. ಡಿವಿಲಿಯರ್ಸ್ 2018ರಲ್ಲಿ ಕ್ರಿಕೆಟ್ನಿಂದ ನಿವೃತ್ತಿ ಪಡೆದಿದ್ದಾರೆ.
Advertisement
ಲೈವ್ ಚಾಟಿಂಗ್ನಲ್ಲಿ ಮಾತನಾಡಿದ ಡಿವಿಲಿಯರ್ಸ್, “ಕೊಹ್ಲಿ ನಿಖರವಾಗಿ ಬಾಲ್ ಬೀಟ್ ಮಾಡ್ತಾರೆ. ಹೀಗಾಗಿ ಅವರು ಫೆಡರರ್ ಇದ್ದಂತೆ. ಸ್ಮಿತ್ ಮಾನಸಿಕವಾಗಿ ಬಲಶಾಲಿಯಾಗಿದ್ದು, ರನ್ ಗಳಿಸುವುದು ಹೇಗೆ ಎಂದು ಅವರು ಲೆಕ್ಕಾಚಾರ ಹಾಕುತ್ತಾರೆ. ಅವರ ಆಟವು ನೈಸರ್ಗಿಕವಾಗಿ ಕಾಣುತ್ತಿಲ್ಲ. ಆದರೆ ಅವರು ದಾಖಲೆಗಳನ್ನು ಮುರಿಯುವ ಸಾಮಥ್ರ್ಯ ಹೊಂದಿದ್ದಾರೆ” ಎಂದು ತಿಳಿಸಿದ್ದಾರೆ.
“ಸಚಿನ್ ತೆಂಡೂಲ್ಕರ್ ಅವರು ಕೊಹ್ಲಿ ಹಾಗೂ ನನಗೆ ಆದರ್ಶ ಕ್ರಿಕೆಟರ್. ಅವರ ಸಾಧನೆಗಳು ನಮಗೆ ಮತ್ತು ಪ್ರತಿಯೊಬ್ಬ ಯುವಕರಿಗೆ ಉದಾಹರಣೆಗಳಾಗಿವೆ. ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟರ್ ಎಂದು ಬಣ್ಣಿಸಿದ್ದಾರೆ. ನನ್ನ ನಂಬಿಕೆ, ಅಭಿಪ್ರಾಯದ ಪ್ರಕಾರ ಕೊಹ್ಲಿ ಅತ್ಯಂತ ಅದ್ಭುತ ಚೇಸಿಂಗ್ ಗುರಿ ಹೊಂದಿದ್ದಾರೆ. ಪ್ರತಿಯೊಂದು ಮಾದರಿ ಕ್ರಿಕೆಟ್ನಲ್ಲೂ ಸಚಿನ್ ಅತ್ಯುತ್ತಮ ಪ್ರದರ್ಶ ನೀಡಿದ್ದಾರೆ. ಆದರೆ ಗುರಿಯನ್ನು ಬೆನ್ನಟ್ಟುವ ವಿಚಾರದಲ್ಲಿ ಕೊಹ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ವಿರಾಟ್ ಬ್ಯಾಟಿಂಗ್ಗೆ ಇಳಿದರೆ ಯಾವುದೇ ಎದುರಾಳಿ ತಂಡ ನೀಡಿದ ಗುರಿ ಸುರಕ್ಷಿತವಾಗಿರಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಿದ್ದಾರೆ.