ಶಿವಮೊಗ್ಗ: ವಿಧಾನಸಭೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.
ಕಾಗೋಡು ತಿಮ್ಮಪ್ಪ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆ ಮಾಡಲಾಗಿತ್ತು. ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಾಗೋಡು ಅವರು ರ್ಯಾಪಿಡ್ ಡೆಸ್ಟ್ ಮಾಡಿಸಿಕೊಂಡಿದ್ದಾರೆ. ರ್ಯಾಪಿಡ್ ಟೆಸ್ಟ್ ನಲ್ಲಿ ಕೊರೊನಾ ಸೋಂಕು ದೃಢವಾಗಿದೆ.
Advertisement
Advertisement
ಕೂಡಲೇ ಅವರನ್ನು ಸಾಗರದಿಂದ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಸದ್ಯಕ್ಕೆ ಕಾಗೋಡು ತಿಮ್ಮಪ್ಪ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ತಿಮ್ಮಪ್ಪ ಅವರಿಗೆ ಕೊರೊನಾ ದೃಢವಾಗಿರುವ ಬಗ್ಗೆ ತಿಳಿದ ಯು.ಟಿ.ಖಾದರ್ ಟ್ವೀಟ್ ಮಾಡುವ ಮೂಲಕ ಬೇಗ ಗುಣಮುಖರಾಗಿ ಬರುವಂತೆ ಹಾರೈಸಿದ್ದಾರೆ. “ನಮ್ಮ ಪ್ರೀತಿಯ ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ. ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಬೇಕು” ಎಂದು ಖಾದರ್ ಹಾರೈಸಿದ್ದಾರೆ.
Advertisement
Received the news of our beloved senior @INCKarnataka leader Shri. #KagoduThimappa ji being tested positive for #COVID19. Wishing him a speedy recovery. My prayers are with him and his family.????????
— UT Khadér (@utkhader) October 11, 2020