ಮಂಗಳೂರು: ನರ್ಸಿಂಗ್ ಕಾಲೇಜಿನಲ್ಲಿ ರ್ಯಾಗಿಂಗ್ ಮಾಡಿರುವ ಕೇರಳ ಮೂಲದ ಆರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀಲಾಲ್, ಶಾಹಿದ್,ಅಮ್ಜದ್, ಜುರೈಜ್, ಹುಸೈನ್, ಲಿಮ್ಸ್ ಬಂಧಿತ ವಿದ್ಯಾರ್ಥಿಗಳಾಗಿದ್ದಾರೆ. ಇವರೆಲ್ಲ ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ಜೂನಿಯರ್ಸ್ ವಾಸವಿದ್ದ ಅಪಾರ್ಟ್ಮೆಂಟ್ಗೆ ನುಗ್ಗಿ ರ್ಯಾಗಿಂಗ್ ಮಾಡಿದ್ದಾರೆ. ನಗರದ ಇಂದಿರಾ ನರ್ಸಿಂಗ್ ಕಾಲೇಜಿನ ಆರು ಜನ ಕೇರಳ ಮೂಲದ ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಕಡಲನಗರಿ ಮಂಗಳೂರು ಶಿಕ್ಷಣಕಾಶಿ ಅಂತಾನು ಕರೆಸಿಕೊಂಡಿದೆ. ಇಲ್ಲಿ ಉನ್ನತ ಶಿಕ್ಷಣಕ್ಕಾಗಿ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊರ ಜಿಲ್ಲೆ, ರಾಜ್ಯ, ವಿದೇಶದಿಂದ ಬಂದವರಿದ್ದಾರೆ. ಕೇವಲ ಆರು ತಿಂಗಳಲ್ಲೇ ಮೂರು ರ್ಯಾಗಿಂಗ್ ಪ್ರಕರಣ ದಾಖಲಾಗಿದ್ದು, ಇದೀಗ ಮತ್ತೊಂದು ರ್ಯಾಗಿಂಗ್ ಕೇಸ್ ದಾಖಲಾಗಿದ್ದು, ಆರು ಜನ ವಿದ್ಯಾರ್ಥಿಗಳು ಅಂದರ್ ಆಗಿದ್ದಾರೆ.
Advertisement
Advertisement
ಕೇರಳ ಮೂಲದ ದ್ವಿತೀಯ ವರ್ಷದ ವಿದಾರ್ಥಿ ಮ್ಯಾನುಯಲ್ ಬಾಬು ಹಾಗೂ ಆತನ ಸಹಪಾಠಿ ವಿದ್ಯಾರ್ಥಿಗಳಿಗೆ ಈ ಆರೋಪಿಗಳು ರ್ಯಾಗಿಂಗ್ ಮಾಡಿದ್ದಾರೆ. ನಾವು ಸೀನಿಯರ್ಸ್ ನಾವು ಬರೋವಾಗ ಎದ್ದು ನಿಂತು ರೆಸ್ಪೆಕ್ಟ್ ಕೊಡ್ಬೇಕು ಎಂದು ಹೋಟೆಲ್ ಒಂದರಲ್ಲಿ ರ್ಯಾಗಿಂಗ್ ನಡೆಸಿದ್ದರು. ಇಷ್ಟು ಮಾತ್ರವಲ್ಲದೇ ವಿದ್ಯಾರ್ಥಿಗಳು ವಾಸವಿದ್ದ ಅಪಾಟ್ಮೆರ್ಂಟ್ನ ರೂಮ್ಗೆ ಎಂಟ್ರಿ ಕೊಟ್ಟು ಒಳ ಚಡ್ಡಿಯಲ್ಲಿ ನಿಲ್ಲಿಸಿ ಹಲ್ಲೆ ಮಾಡಿದ್ದಾರೆ. ನಾವು ಬರೋವಾಗ ನೀವು ತಲೆ ತಗ್ಗಿಸಿ ಕುಳಿತುಕೊಳ್ಳಬೇಕು, ನಾವು ಹೇಳಿದಂತೆ ಕೇಳಬೇಕು, ಕಾಲೇಜಿಗೆ ಬರುವಾಗಲು ನಮ್ಮ ಎದುರು ಅಡಿಗೆ ತಲೆ ಹಾಕಿಕೊಂಡು ಹೋಗಬೇಕು ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಒಡ್ಡಿದ್ದರು. ಹೀಗಾಗಿ ಮ್ಯಾನುಯಲ್ ಬಾಬು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ರ್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ರ್ಯಾಗಿಂಗ್ ತಡೆಯುವುದಕ್ಕಾಗಿ ಪೊಲೀಸ್ ಸೂಚನೆಯಂತೆ ಕಾಲೇಜುಗಳಲ್ಲಿ ಆ್ಯಂಟಿ ರ್ಯಾಗಿಂಗ್ ಕಮಿಟಿ ಮಾಡಲಾಗಿದೆ. ಈಗಾಗಲೇ ಈ ಹಿಂದಿನ ಮೂರು ಪ್ರಕರಣದಲ್ಲಿ 18ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ರ್ಯಾಗಿಂಗ್ ಪ್ರಕರಣದ ವಿದ್ಯಾರ್ಥಿಗಳಿಗೆ ಯಾವುದೇ ಎಕ್ಸ್ಕ್ಯೂಝ್ ನೀಡಲ್ಲ ಎಂದು ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.