ಮುಂಬೈ: ವಿದೇಶಗಳಲ್ಲಿ ಐಪಿಎಲ್ 2020 ಆವೃತ್ತಿ ಆಯೋಜಿಸಿವುದು ಬಿಸಿಸಿಐ ಎದುರಿರುವ ಅಂತಿಮ ಆಯ್ಕೆ ಮಾತ್ರವಷ್ಟೇ ಎಂದು ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ವೈರಸ್ ಕಾರಣದಿಂದ ಮಾರ್ಚ್ 29 ಆರಂಭವಾಗಬೇಕಿದ್ದ 2020ರ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಒಂದೊಮ್ಮೆ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಬೇಕಿರುವ ವಿಶ್ವಕಪ್ ಟಿ20 ಮುಂದೂಡಿದರೆ ಈ ಅವಧಿಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ.
Advertisement
Advertisement
ಭಾರತದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗದಿರುವುದರಿಂದ ಸೆಪ್ಟಂಬರ್ ವೇಳೆಗೆ ವೈರಸ್ ಪ್ರಭಾವ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಪರಿಣಾಮ ವಿದೇಶಿದಲ್ಲಿ ಐಪಿಎಲ್ ಆಯೋಜಿಸಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಟೂರ್ನಿಯ ಅತಿಥ್ಯ ವಹಿಸಿಕೊಳ್ಳಲು ಶ್ರೀಲಂಕಾ, ಯುಎಇ, ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಗಳು ಸಿದ್ಧರಾಗಿರುವುದಾಗಿ ಹೇಳಿವೆ.
Advertisement
ವಿದೇಶಿದಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲಾಗುತ್ತದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ಅರುಣ್ ಧುಮಾಲ್, ಭಾರತದಲ್ಲೇ ಐಪಿಎಲ್ ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ. ದೇಶದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಹತೋಟಿಗೆ ಬಾರದಿದ್ದರೆ ಮಾತ್ರ ವಿದೇಶದಲ್ಲಿ ಆಯೋಜಿಸಲು ಆಲೋಚಿಸುತ್ತೇವೆ. ಯುಎಇ, ಶ್ರೀಲಂಕಾ, ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಗಳು ಐಪಿಎಲ್ಗೆ ಅತಿಥ್ಯ ವಹಿಕೊಳ್ಳುವ ಕುರಿತು ಹೇಳಿವೆ. ಒಂದೊಮ್ಮೆ ಐಪಿಎಲ್ ವಿದೇಶದಲ್ಲಿ ನಡೆಯುವ ಪರಿಸ್ಥಿತಿ ನಿರ್ಮಾಣವಾದರೇ ಐಪಿಎಲ್ ಆಡಳಿತಾತ್ಮಕ ಸಭೆಯಲ್ಲಿ ಚರ್ಚೆ ನಡೆಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಆದರೆ ವಿದೇಶದಲ್ಲಿ ನಮಗೆ ಟೂರ್ನಿ ಆಯೋಜಿಸುವುದು ಬಿಸಿಸಿಐ ಮುಂದಿರುವ ಅಂತಿಮ ಆಯ್ಕೆ ಅಷ್ಟೇ ಎಂದು ಹೇಳಿದ್ದಾರೆ.
Advertisement
2009ರ ಚುನಾವಣೆಯ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹಾಗೂ 2014ರ ಚುನಾವಣೆಯ ಕಾರಣದಿಂದ ಯುಎಇನಲ್ಲಿ ಟೂರ್ನಿ ಆಯೋಜಿಸಲಾಗಿತ್ತು. ಈಗಾಗಲೇ ಟೂರ್ನಿ ಆಯೋಜಿಸುವ ಅನುಭವ ಹೊಂದಿರುವ ಹಿನ್ನೆಲೆಯಲ್ಲಿ 2020ರ ಟೂರ್ನಿಗೆ ಅತಿಥ್ಯ ವಹಿಸಲು ಅವಕಾಶ ನೀಡುವಂತೆ ಯುಎಇ ಮನವಿ ಮಾಡಿದೆ. ಇತ್ತ ಕೊರೊನಾ ವೈರಸ್ ಪ್ರಭಾವ ಕಡಿಮೆ ಇರುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಟೂರ್ನಿ ಆಯೋಜಿಸುವುದಾಗಿ ಶ್ರೀಲಂಕಾ ಹೇಳಿದೆ. ಇತ್ತೀಚೆಗೆ ದೇಶದಲ್ಲಿ ನ್ಯೂಜಿಲೆಂಡ್ ನಲ್ಲಿ ಶೂನ್ಯ ಕೊರೊನಾ ಪ್ರಕರಣಗಳು ಎಂದು ಘೋಷಣೆ ಮಾಡಿಕೊಂಡ ಬಳಿಕ ನ್ಯೂಜಿಲೆಂಡ್ ಬೋರ್ಡ್ ಕೂಡ ಐಪಿಎಲ್ ಆಯೋಜಿಸಲು ಪ್ರಸ್ತಾವನೆ ಸಲ್ಲಿಸಿದೆ.