– ನೋವಿನಿಂದ ಕಿರುಚಿಕೊಂಡ್ರೂ ಬಿಡದೇ ಕತ್ತು ಸೀಳಿದ
ಭೋಪಾಲ್: ತಾಯಿಯ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮಗನನ್ನು ಧೀರೇಂದ್ರ ಪಾಂಡೇ ಎಂದು ಗುರುತಿಸಲಾಗಿದ್ದು, ರೇವಾ ಜಿಲ್ಲೆಯ ಖಟಿಕಾ ಗ್ರಾಮದ ನಿವಾಸಿ. ಈತ ತನ್ನ ತಾಯಿ ಸಾವಿತ್ರಿ ಪಾಂಡೇ(44)ಯನ್ನು ಕಳೆದ ಭಾನುವಾರ ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರೇವಾ ಪೊಲೀಸರು, ಯುವಕನ ಕೈಯಿಂದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
Advertisement
ಪತಿ ಕೃಪಾಶಂಕರ್ ಪಾಂಡೇ(46) ಭಾನುವಾರ ತನ್ನ ಪತ್ನಿಯನ್ನು ಯಾರೋ ಹರಿತವಾದ ಆಯುಧಗಳಿಂದ ಕೊಲೆ ಮಾಡಿದ್ದಾರೆ. ಅಲ್ಲದೆ ಮೃತದೇಹವನ್ನು ಸ್ಥಳೀಯ ಕಾಡಿಗೆ ಎದೆದಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಪೊಲೀಸ್ ಆಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಿದಾಗ, ಕಳೆದ ವರ್ಷ ಹಿರಿಯ ಮಗ ತೀರಿಕೊಂಡಿದ್ದನು. ಆ ಬಳಿಕದಿಂದ ಸಾವಿತ್ರಿ ಅವರು ಖಿನ್ನತೆಗೆ ಒಳಗಾಗಿದ್ದರು. ಮಗನನ್ನು ಆಗಾಗ ನೆನಪುಮಾಡಿಕೊಂಡು ಅಳುತ್ತಿದ್ದರು. ಒಟ್ಟಿನಲ್ಲಿ ಮಗನ ಮರಣದ ನಂತರ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು ಎಂಬ ವಿಚಾರ ಬೆಳಕಿಗೆ ಬಂತು.
Advertisement
ಸಾವಿತ್ರಿ ಅವರ ಕಿರಿಯ ಮಗ ಧೀರೇಂದ್ರ ನಿರುದ್ಯೋಗಿಯಾಗಿದ್ದನು. ಈತ ತನ್ನ ತಾಯಿ ನನ್ನನ್ನು ಪ್ರೀತಿ ಮಾಡುವುದಕ್ಕಿಂತ ಹೆಚ್ಚು ಅಣ್ಣನನ್ನು ಪ್ರೀತಿ ಮಾಡುತ್ತಾಳೆ ಎಂದು ಭಾವಿಸಿಕೊಂಡು ಆಕೆಯನ್ನು ದ್ವೇಷಿಸಲು ಆರಂಭಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಧೀರೇಂದ್ರ ತನ್ನ ಪತ್ನಿ, ತಾಯಿ ಹಾಗೂ ತಂದೆಯೊಂದಿಗೆ ಆಗಾಗ್ಗೆ ಕ್ಲುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡುತ್ತಿದ್ದನು ಎಂದು ಸಿಂಗ್ ಹೇಳಿದ್ದಾರೆ.
Advertisement
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಧೀರೇಂದ್ರ, ತಾಯಿಯನ್ನು ಕೊಲ್ಲುವುದಾಗಿ ಹಲವು ಬಾರಿ ಬೆದರಿಕೆ ಕುಡ ಹಾಕಿದ್ದನು ಎಂದು ಆತನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೊಲೆಯಲ್ಲಿ ಮಗ ಧೀರೇಂದ್ರ ಪಾತ್ರ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದರು.
ತಂದೆಯ ಹೇಳಿಕೆಯಂತೆ ಮಂಗಳವಾರ ಧಿರೇಂದ್ರನನ್ನು ಮನೆಯಿಂದಲೇ ವಶಕ್ಕೆ ಪಡೆದ ಪೊಲೀಸರು, ತನಿಖೆ ನಡೆಸಿದರು. ಈ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕೊಲೆ ಮಾಡಿದ್ದು ಮಾತ್ರವಲ್ಲ ವಿಡಿಯೋ ಕೂಡ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಆತನ ಮೊಬೈಲ್ ಫೋನಿನಲ್ಲಿದ್ದ ವಿಡಿಯೋವನ್ನು ಪೊಲೀಸರು ನೋಡಿದ್ದಾರೆ. ವಿಡಿಯೋದಲ್ಲಿ, ಧೀರೇಂದ್ರ ಹರಿತವಾದ ಆಯುಧವನ್ನು ಹಿಡಿದುಕೊಂಡು ತನ್ನ ತಾಯಿ ಸಾವಿತ್ರಿಯ ಕತ್ತು ಸೀಳಿದ್ದಾನೆ. ಪರಿಣಾಮ ಸಾವಿತ್ರಿ ನೋವಿನಿಂದ ಕಿರುಚಾಡುತ್ತಿದ್ದಾರೆ. ಅಲ್ಲದೆ ನನ್ನನ್ನು ಬಿಟ್ಟು ಹೋಗು ಎಂದು ತನ್ನ ಮಗನ ಮುಂದೆ ಅಸಾಹಯಕತೆಯಿಂದ ಮನವಿ ಮಾಡಿಕೊಂಡಿದ್ದಾರೆ. ಈ ಕೃತ್ಯ ನಡೆದಾಗ ಮನೆಯಲ್ಲಿ ಆರೋಪಿ ಹಾಗೂ ತಾಯಿ ಸಾವಿತ್ರಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಆರೋಪಿ ಧೀರೇಂದ್ರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಧೀರೇಂದ್ರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಿದ್ದಾರೆ.