ವಿಜಯಪುರ: ಇಂದು ಬೆಳಗಿನ ಜಾವ ವಿಜಯಪುರ ನಗರದಲ್ಲಿ ಭಾರೀ ಸದ್ದು ಕೇಳಿಸಿದ್ದು, ಇದ್ದಕ್ಕಿದ್ದಂತೆ ಭೂಮಿ ನಡುಗಿದ ಅನುಭವ ಆಗಿದೆ. ವಿಜಯಪುರದ ಅರ್ಧ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವದಿಂದ ವಿಜಯಪುರ ಶೇಕ್ ಶೇಕ್ ಆಗಿದೆ.
ವಿಜಯಪುರದ ಆನಂದನಗರ, ಕಾಳಿಕಾನಗರ, ಮುಕುಂದನಗರ, ಗಚ್ಚಿನಕಟ್ಟಿ ಕಾಲೋನಿ ಸೇರಿದಂತೆ ಹಲವೆಡೆ ಭೂಕಂಪನ ಅನುಭವಾಗಿದೆ. ತಡರಾತ್ರಿ ಹಾಗೂ ಬೆಳಗಿನ ಜಾವ ಎರಡು ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ.
Advertisement
Advertisement
ಭೂಮಿ ಕಂಪಿಸಿದ ಅನುಭವಕ್ಕೆ ಮನೆಯ ಪಾತ್ರೆಗಳು, ಮನೆಯ ಮೇಲ್ಛಾವಣಿಯ ಶೀಟ್(ತಗಡು) ಹಾಗೂ ಕಿಟಕಿಗಳು ಅಲುಗಾಡಿದೆ. ಆದ್ರೆ ಇದುವರೆಗೂ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾಗಲಿ, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
Advertisement
ಇದಕ್ಕೂ ಮುಂಚೆ ಮೂರ್ನಾಲ್ಕು ಬಾರಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಕೋಲ್ಹಾರ ಸೇರಿದಂತೆ ಅನೇಕ ತಾಲೂಕುಗಳಲ್ಲಿ ಭಾರೀ ಸದ್ದು ಕೇಳಿ ಬಂದಿತ್ತು. ಈಗ ಮತ್ತೆ ಅದೇ ಅನುಭವ ಆದ ಕಾರಣ ನಗರದ ಜನರು ಬೆಚ್ಚಿಬಿದ್ದಿದ್ದಾರೆ.
Advertisement