– ದೇವರ ಆಶೀರ್ವಾದವೆಂದು ನಂಬಿದ ಮಾಲೀಕ
ಲಕ್ನೋ: ಮೇಕೆಯೊಂದು ವಿಚಿತ್ರ ಮರಿಗೆ ಜನ್ಮ ನಿಡಿದ್ದು, ಇದೀಗ ಈ ಮರಿಯನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ. ಈ ಘಟನೆ ಉತ್ತರಪ್ರದೇಶದ ಬಿಂಜೋರ್ ಜಿಲ್ಲೆಯಲ್ಲಿ ನಡೆದಿದೆ.
ಮೇಕೆ ಮರಿ ಹಣೆಯ ಮೇಲೆ ದೊಡ್ಡದಾದ ಕಣ್ಣು ಹೊಂದಿದೆ. ಮೂಗಿಲ್ಲದೆ ತಿರುಚಿದ ಬಾಯಿ ಹಾಗೂ ನಾಲಗೆಯನ್ನು ಸ್ವಲ್ಪ ಹೊರ ಹಾಕಿದಂತೆ ಇದೆ. ಇದೀಗ ಆ ಗ್ರಾಮದ ಜನರ ಆಕರ್ಷಣೀಯ ಪ್ರಾಣಿಯಾಗಿದೆ.
Advertisement
Advertisement
ಇನ್ನು ಈ ಸಂಬಂಧ ನೂರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೊರಾಹತ್ ಗ್ರಾಮದ ನಿವಾಸಿ ಮಾಸಿಯಾ ಅವರು ಆಡುಗಳನ್ನು ಮನೆಯಲ್ಲಿ ಸಾಕುತ್ತಾರೆ. ಒಂದು ಎರಡು ದಿನಗಳ ಹಿಂದೆಯಷ್ಟೇ ಎರಡು ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ ಒಂದು ಸಾಮಾನ್ಯವಾಗಿದ್ದರೆ, ಇನ್ನೊಂದು ವಿಚಿತ್ರವಾಗಿದೆ. ಈ ವಿಚಾರ ಗ್ರಾಮದಲ್ಲಿ ಹಬ್ಬುತ್ತಿದ್ದಂತೆಯೇ ಸುತ್ತಮುತ್ತಲಿನ ಜನ ಮರಿಗಳನ್ನು ನೋಡಲು ದಾಂಗುಡಿ ಇಡುತ್ತಿದ್ದಾರೆ. ಹಣೆಯ ಮೇಲೆ ‘ಮೂರನೆಯ ಕಣ್ಣು’ ಇರುವುದರಿಂದ ಇದು ಶಿವನ ಅವತಾರ ಎಂದು ಕೆಲವರು ಹೇಳುತ್ತಿದ್ದಾರೆ.
Advertisement
Advertisement
ಇತ್ತ ಮಾಲೀಕ ಮಾಸಿಯಾ ಅವರು ಮಾತ್ರ ಇದು ದೇವರ ಆಶೀರ್ವಾದ ಎಂದು ನಂಬಿದ್ದಾರೆ. ಹೀಗಾಗಿ ಕೆಲವರು ಈ ಮರಿಗೆ ಪೂಜೆ ಕೂಡ ಮಾಡಿದ್ದಾರೆ. ಇನ್ನು ಈ ಮಧ್ಯೆ ಪಶುವೈದ್ಯ ವೈದ್ಯ ಪುಷ್ಕರ್ ರತಿ ಪ್ರತಿಕ್ರಿಯಿಸಿ, ಪ್ರಾಣಿ ಅಸಹಜವಾಗಿದೆ ಮತ್ತು ಅಂತಹ ಪ್ರಾಣಿಗಳು ಹೆಚ್ಚು ಕಾಲ ಬದುಕುವುದಿಲ್ಲ. ಇದು ವಿಲಕ್ಷಣ ಮತ್ತು ದೈವಿಕ ಆಶೀರ್ವಾದ ಎಂದು ಪರಿಗಣಿಸಬಾರದು ಎಂದು ಹೇಳಿದರು.