ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ನಿನ್ನೆ ಮತ್ತು ಇಂದು ಆಸ್ಪತ್ರೆಯಲ್ಲಿ 11 ಮಂದಿ ಚೀನಿ ವೈರಸ್ ಗೆ ಬಲಿಯಾಗಿದ್ದಾರೆ. ಮೃತಪಟ್ಟ 11 ಜನ ಕೂಡ ಬೆಂಗಳೂರಿನ ನಿವಾಸಿಗಳೇ ಆಗಿದ್ದಾರೆ. ಈ ಮೂಲಕ ಇದೀಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ.
Advertisement
Advertisement
ಸುಮಾರು 45 ರಿಂದ 65 ವರ್ಷದ ಒಳಗಿನ ವ್ಯಕ್ತಿಗಳೇ ಇಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಅತಿ ದೊಡ್ಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ 258 ಏರಿಕೆಯಾಗಿರುವುದು ಆತಂಕ ತಂದೊಡ್ಡಿದೆ.
Advertisement
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಸಾವನ್ನಪ್ಪಿದೆ. ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಮಗು ಜನಿಸಿತ್ತು. ತಾಯಿ ಒಂದು ವಾರದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಹೆರಿಗೆಯಾಗಿದೆ. ಆದರೆ ಜನಿಸಿದ ಮೂರ್ನಾಲ್ಕು ಗಂಟೆಗಳಲ್ಲೇ ಕಂದಮ್ಮ ಕೊನೆಯುಸಿರೆಳೆದಿದೆ.
Advertisement
ಆಗ ತಾನೇ ಹುಟ್ಟಿದ ಮಗುವಿಗೆ ಕೊರೊನಾ ದೃಢವಾಗಿತ್ತು. ಆದರೆ ಮಗುವಿಗೆ ಹೇಗೆ ಸೋಂಕು ಬಂತು ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೊರೊನಾದಿಂದ ಮೃತಪಟ್ಟ ಮಗುವಿಗೆ ಅಂತ್ಯ ಸಂಸ್ಕಾರವನ್ನು ಅಂಬುಲೆನ್ಸ್ ಸಿಬ್ಬಂದಿಯೇ ನೆರವೇರಿಸಿದ್ದಾರೆ. ಮಗುವಿನ ತಾಯಿಗೆ ಕೊರೊನಾ ಪಾಸಿಟಿವ್ ಇದೆ. ಮಗುವಿನ ತಂದೆ ಅಥವಾ ಕುಟುಂಬದವರು ಯಾರೂ ಮಗುವನ್ನು ನೋಡಲು ಬಂದಿಲ್ಲ. ಹೀಗಾಗಿ ಆಸ್ಪತ್ರೆಯ ಅಂಬುಲೆನ್ಸ್ ಸಿಬ್ಬಂದಿಯೇ ಮಗುವಿನ ಅಂತ್ಯಸಂಸ್ಕಾರ ಮಾಡಿದ್ದಾರೆ.