– ತರಕಾರಿ ಮಾರುತ್ತಾ ಹುಡುಗಿ ಜೊತೆ ಲವ್
ನವದೆಹಲಿ: ವಿಕಲಾಂಗ ಪತ್ನಿಯನ್ನ ಆಸ್ಪತ್ರೆಯಲ್ಲಿ ಬಿಟ್ಟ ಯುವಕ 13 ವರ್ಷದ ಬಾಲಕಿ ಜೊತೆ ಓಡಿ ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್ 18ರಂದು ಘಟನೆ ನಡೆದಿದ್ದು, ಬಾಲಕಿಯ ಪೋಷಕರು ತಮ್ಮ ಬಡವಾಣೆಗೆ ತರಕಾರಿ, ಹಣ್ಣು ಮಾರಲು ಬರುತ್ತಿದ್ದ ಯುವಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
Advertisement
28 ವರ್ಷದ ದಿಲ್ದಾರ್ ಅಲಿಯಾಸ್ ರಾಹುಲ್ ಠಾಕೂರ್ ವಿರುದ್ಧ ಅಪಹರಣದ ಆರೋಪ ಕೇಳಿ ಬಂದಿದೆ. ರಾಹುಲ್ ಈಗಾಗಲೇ ಮದುವೆಯಾಗಿದೆ. ಲಾಕ್ಡೌನ್ ವೇಳೆ ನಮ್ಮ ಬಡಾವಣೆಗೆ ತರಕಾರಿ ಮತ್ತು ಹಣ್ಣು ಮಾರಲು ಬರುತ್ತಿದ್ದನು. ಈ ವೇಳೆ ತನ್ನನ್ನು ರಾಹುಲ್ ಠಾಕೂರ್ ಎಂದು ಪರಿಚಯಿಸಿಕೊಂಡಿದ್ದ ಯುವಕ ನಮ್ಮ ಮೊಬೈಲ್ ನಂಬರ್ ಪಡೆದುಕೊಂಡಿದ್ದನು. ಮೊಬೈಲ್ ನಂಬರ್ ಪಡೆದ ರಾಹುಲ್ ಮಗಳನ್ನು ಪ್ರೀತಿಯಲ್ಲಿ ಬೀಳಿಸಿಕೊಂಡು ಆಕೆಯನ್ನ ಕರೆದುಕೊಂಡು ಹೋಗಿದ್ದಾನೆ ಎಂದು ಬಾಲಕಿ ತಾಯಿ ಆರೋಪಿಸಿದ್ದಾರೆ.
Advertisement
Advertisement
ಬಾಲಕಿಯ ಪೋಷಕರ ದೂರಿನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ರಾಹುಲ್ ಅಲಿಯಾಸ್ ದಿಲ್ದಾರ್ ಉತ್ತರ ಪ್ರದೇಶದ ಬಂದಾಯು ನಿವಾಸಿಯಾಗಿದ್ದು, ದೆಹಲಿಯ ಮಹರೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದನು.
Advertisement
ಆರೋಪಿ ಪತ್ನಿಯ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಸೆಪ್ಟೆಂಬರ್ ನಲ್ಲಿ ಗರ್ಭಿಣಿ ಪತ್ನಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಿದ್ದನು. ಪತ್ನಿಯ ಡಿಸ್ಚಾರ್ಜ್ ಗೂ ಮೊದಲೇ 13 ವರ್ಷದ ಬಾಲಕಿಯನ್ನ ಕರೆದುಕೊಂಡು ಓಡಿ ಹೋಗಿದ್ದಾನೆ.
ಆರೋಪಿ ಈ ಮೊದಲು ಸಹ ಹಲವು ಬಾರಿ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಸಿಸಿಟವಿ ಕ್ಯಾಮೆರಾದಲ್ಲಿ ಆರೋಪಿ 13 ವರ್ಷದ ಬಾಲಕಿ ಜೊತೆ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.