ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಧಿಕ ಬಡ್ಡಿ ನೀಡಿಲ್ಲವೆಂದು ವಾಟ್ಸಪ್ನಲ್ಲಿ ತೇಜೋವಧೆ ಮಾಡಿದ್ದರೆ ಎಂದು ಆರೋಪಿಸಿ ವೆಸ್ಟ್ ಆಫ್ ಕಾರ್ಡ್ ರೋಡ್ ನಿವಾಸಿ ವೈ.ಕೆ.ದೇವನಾಥ್ ಎಂಬುವರು ದೂರು ನೀಡಿದ್ದರು. ಸಂಬರಗಿ ವಿರುದ್ಧ ಐಪಿಸಿ ಸೆಕ್ಷನ್ 499(ಮಾನಹಾನಿ) 500(ಮಾನಹಾನಿಗಾಗಿ ದಂಡನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ.
Advertisement
Advertisement
ದೂರಿನಲ್ಲಿ ಏನಿದೆ?
ಪ್ರಶಾಂತ್ ಸಂಬರಗಿ ಬಳಿ ನಾನು ಬಡ್ಡಿ ಸಾಲ ಪಡೆದಿದ್ದೆ. ಈ ವೇಳೆ ಭದ್ರತೆಗಾಗಿ ನನ್ನ ಆಸ್ತಿ-ಪತ್ರಗಳನ್ನು ಅಡವಿಟ್ಟಿದ್ದೆ. ಸಾಲದ ಹಣ ಬಡ್ಡಿ ಸಮೇತ ಹಣ ಪಾವತಿಸಿದ್ದರೂ ಆಸ್ತಿ ದಾಖಲಾತಿಯನ್ನು ವಾಪಸ್ ನೀಡಿಲ್ಲ. ಆಸ್ತಿ ದಾಖಲಾತಿಯನ್ನು ನೀಡಬೇಕಾದರೆ ಶೇ.10 ರಷ್ಟು ಬಡ್ಡಿ ಹಣವನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಬಡ್ಡಿ ಹಣವನ್ನು ನೀಡದ್ದಕ್ಕೆ ಸಿಸಿಬಿಯಲ್ಲಿ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಸಿ ವಾಟ್ಸಪ್ ಗ್ರೂಪ್ನಲ್ಲಿ ದೇವನಾಥ ದೊಡ್ಡ ಮೋಸಗಾರ ಎಂದು ಅವಹೇಳನಕಾರಿ ಸಂದೇಶ ಪ್ರಕಟಿಸಿ ನನ್ನ ಗೌರವವನ್ನು ಹಾನಿ ಮಾಡಿ ಘನತೆಗೆ ಕುಂದುಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.