ಕೋಲಾರ: ವರದಕ್ಷಿಣೆ ಕಿರುಳದ ಆರೋಪಿಗೆ ಕೊರೊನಾ ಸೋಂಕು ಬಂದಿರುವ ಶಂಕೆ ವ್ಯಕ್ತವಾಗಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲು ನಗರ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.
ಠಾಣೆಯಲ್ಲಿದ್ದ ಆರೋಪಿ ಸೋಂಕು ತಗಲಿರುವ ಶಂಕೆ ಇರುವ ಕಾರಣ, ಮುಳಬಾಗಿಲು ನಗರ ಠಾಣೆಯ ಪಿಎಸ್ಐ ಸೇರಿದಂತೆ 22 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ವರದಕ್ಷಿಣೆ ಕಿರುಕುಳ ಹಿನ್ನೆಲೆ ಬೆಂಗಳೂರಿನ ಕೆ.ಅರ್.ಪುರ ಮೂಲದ ಆರೋಪಿಯನ್ನು ಪೋಲಿಸರು ಬಂಧಿಸಿದ್ದರು. ಆತನಿಗೆ ಕೊರೊನಾ ಇದ್ದು, ಈ ಬಗ್ಗೆ ನಾಳೆಯ ಬುಲೆಟಿನ್ ಅಲ್ಲಿ ಅಧಿಕೃತವಾಗಿ ಘೋಷಣೆಯಾಲಿದೆ.
Advertisement
Advertisement
ಆರೋಪಿಯನ್ನು ಬಂಧಿಸಿ ಮೂರು ದಿನ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗಿತ್ತು. ನಂತರ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಈ ಕಾರಣ ಠಾಣೆ ಸುತ್ತಾ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಮುಳಬಾಗಿಲು ವೈಎಸ್ಪಿ ನಾರಾಯಣಸ್ವಾಮಿ, ಪಿಎಸ್ಐ ಶ್ರೀನಿವಾಸ್ ಸೇರಿ 22 ಜನ ಹೋಂ ಕ್ವಾರಂಟೈನ್ ಮಾಡಲಾಗಿದೆ.