ಬೆಂಗಳೂರು: ಲೋನ್ ಪಡೆಯಲು ಶ್ಯೂರಿಟಿ ಹಾಕುವಂತೆ ಕೇಳಿದ್ದರು. ಆದರೆ ಅವರ ಬಳಿ ಆಸ್ತಿಯ ಕುರಿತು ಯಾವುದೇ ಓರಿಜಿನಲ್ ದಾಖಲೆಗಳು ಇರಲಿಲ್ಲ. ಹೀಗಾಗಿ ಇದು ಫೇಕ್ ಎಂದು ತಿಳಿದು ದೂರು ನೀಡಿದೆವು ಎಂದು ನಿರ್ಮಾಪಕ ಉಮಾಪತಿಯವರು ತಿಳಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 25 ಕೋಟಿ ರೂ. ವಂಚನೆ ಪ್ರಕರಣದ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದು, ಈ ಕುರಿತು ನಿರ್ಮಾಪಕ ಉಮಾಪತಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
Advertisement
Advertisement
ಹರ್ಷ ಅವರು ಲೋನ್ಗೆ ಅಪ್ಲೈ ಮಾಡಿದ್ದರು, ಶ್ಯೂರಿಟಿ ಹಾಕುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಾನಗೆ ಫೋನ್ ಕರೆ ಬಂದಿತ್ತು. ಇದಾದ ಬಳಿಕ ದರ್ಶನ್ ಅವರು ಹಾಗೂ ನಾನು ಮಾತನಾಡಿಕೊಂಡು ಬಳಿಕ ಡಾಕ್ಯೂಮೆಂಟ್ ವೆರಿಫಿಕೇಶನ್ಗೆ ಕರೆಯುತ್ತೇವೆ. ಆಗ ಅವರ ಬಳಿ ಸಂಪೂರ್ಣವಾದ ದಾಖಲೆ ಇಲ್ಲದಿರುವುದು ಹಾಗೂ ಫೇಕ್ ಎನ್ನುವುದು ತಿಳಿಯುತ್ತದೆ. ಇದನ್ನೂ ಓದಿ: ನನಗೆ ಸ್ವಲ್ಪ ಸಮಯ ಕೊಡಿ, ಸತ್ಯ ಹೊರಗೆ ಬರಲಿದೆ: ದರ್ಶನ್
Advertisement
ಬಳಿಕ ದರ್ಶನ್ ಅವರು ಹಾಗೂ ನಾನು ನಮ್ಮ ಆಫೀಸ್ನಲ್ಲಿ ಕುಳಿತು ಮಾತನಾಡಿ, ಬಳಿಕ ನಮ್ಮ ಆಫೀಸ್ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ. ಆದರೆ ಈ ಆಸ್ತಿ ಮೈಸೂರು ವ್ಯಾಪ್ತಿಗೆ ಬರುತ್ತವೆ ಎಂದು ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಬಳಿಕ ತನಿಖೆ ಆರಂಭವಾಗುತ್ತದೆ, ಕೆಲ ಮಾಹಿತಿ ಬೇಕೆಂದು ನನ್ನನ್ನು, ದರ್ಶನ್ ಅವರನ್ನು ಹಾಗೂ ಹರ್ಷ ಅವರನ್ನು ಕರೆದಿದ್ದರು. ಬಳಿಕ ನಾವು ಪೊಲೀಸರಿಗೆ ಮಾಹಿತಿ ನೀಡಿ ಬಂದಿದ್ದೇವೆ ಎಂದು ವಿವರಿಸಿದರು.
Advertisement
ಯಾವ ಆಸ್ತಿ, ಅದರ ಆಧಾರದ ಕುರಿತು ಯಾವುದೇ ಒರಿಜಿನಲ್ ಡಾಕ್ಯೂಮೆಂಟ್ ಇಲ್ಲ. ಅಲ್ಲದೆ ದರ್ಶನ್ ಅವರಿಗೆ ಸಂಬಂಧಿಸಿದ ದಾಖಲೆಗಳು ಸಹ ಇಲ್ಲ. ಆದರೆ ಯಾವುದೋ ವಿವರ ಬರೆದು ಹಾಕಿದ್ದಾರೆ. ಆಸ್ತಿ ದಾಖಲೆ ಯಾವುದೂ ಇಲ್ಲ ಎಂದಿದ್ದಾರೆ. ಒಟ್ಟು 25 ಕೋಟಿ ರೂ. ಲೋನ್ ಗೆ ಅಪ್ಲೈ ಮಾಡಿ ಶ್ಯೂರಿಟಿ ಹಾಕಲು ನಮ್ಮ ಬಳಿ ಬಂದಿದ್ದರು. ಆದರೆ ಆಸ್ತಿಯ ಯಾವುದೇ ದಾಖಲೆ ಇವರ ಬಳಿ ಇರಲಿಲ್ಲ. ಯಾಕೆ ಹೀಗೆ ಮಾಡಿದರು ಎಂಬುದನ್ನು ತಿಳಿದುಕೊಳ್ಳಲು ದೂರು ನಿಡಿದ್ದೇವೆ. ಇನ್ನೂ ಸರಿಯಾದ ಮಾಹಿತಿಯನ್ನು ಬಾಯ್ಬಿಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಪರಿಚಯ ಹೇಗಾಯ್ತು?
ಅರುಣಾ ಕುಮಾರಿ ಅವರು ಏಪ್ರಿಲ್ನಿಂದ ನನಗೆ ಪರಿಚಯವಾಗಿದ್ದರು. ಲೋನ್ ವಿಚಾರವಾಗಿ ನನ್ನ ಬಳಿ ಮಾತನಾಡುತ್ತಿದ್ದರು. ಮೇನಲ್ಲಿ ಈ ಘಟನೆ ನಡೆದಿದೆ, ಜೂನ್ನಲ್ಲಿ ದರ್ಶನ್ ಅವರಿಗೆ ಮಾಹಿತಿ ನೀಡಿ, ಇದೀಗ ದೂರು ನೀಡಿದ್ದೇವೆ. ಪರಿಚಯವಾದ ನಂತರ ಲೋನ್ ಬಗ್ಗೆ ಮಾತನಾಡಿದ್ದರು, ಬಳಿಕ ಫೆಸ್ಬುಕ್ನಲ್ಲಿ ಅರುಣಾ ಕುಮಾರಿ ಪರಿಚಯವಾಗಿದ್ದರು. ಮ್ಯಾನೇಜರ್ ಎಂದೇ ಪರಿಚಯ ಮಾಡಿಕೊಂಡಿದ್ದರು. ನಮ್ಮಲ್ಲಿ ಪ್ರಾಪರ್ಟಿ ಸೀಜ್ ಆಗುತ್ತಿರುತ್ತದೆ, ತೆಗೆದುಕೊಳ್ಳಲು ಆಸಕ್ತಿ ಇದ್ದರೆ ನಿಮಗೆ ಕೊಡುತ್ತೇನೆ ಎಂದಿದ್ದರು.
ಇದಾದ ಬಳಿಕ ಲೋನ್ ವಿಚಾರದಲ್ಲಿ ದರ್ಶನ್ ಸರ್ ಹಾಗೂ ನಿಮ್ಮ ಹೆಸರು ಬರುತ್ತಿದೆ, ನೀವು ಲೋನ್ಗೆ ಅಪ್ಲೈ ಮಾಡುತ್ತಿದ್ದಿರಂತೆ ಎಂದು ಕೇಳಿದರು. ಆಗ ಇಲ್ಲ ನಾವು ಯಾವುದೇ ಲೋನ್ಗೆ ಅಪ್ಲೈ ಮಾಡುತ್ತಿಲ್ಲ. ಶ್ಯೂರಿಟಿನೂ ಹಾಕುತ್ತಿಲ್ಲ ಎಂದು ಹೇಳಿದೆ ಎಂದು ಉಮಾಪತಿಯವರು ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.