ಲೇಹ್: ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಲೇಹ್ ವಾಯುನೆಲೆಗೆ ದಿಢೀರ್ ಭೇಟಿ ನೀಡಿದ್ದಾರೆ.
ಸೇನಾ ಮುಖ್ಯಸ್ಥರು ಯಾವುದೇ ನೆಲೆಗೆ ಭೇಟಿ ನೀಡುವುದಿದ್ದರೆ ಅದು ಪೂರ್ವ ನಿಗದಿಯಾಗಿರುತ್ತದೆ. ಆದರೆ ಭದೌರಿಯಾ ಬುಧವಾರ ಭೇಟಿ ನೀಡಿ ಸಹದ್ಯೋಗಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಬುಧವಾರ ಮಧ್ಯಾಹ್ನ ಚೀಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಜೊತೆ ಸಭೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ವಾಯುಸೇನೆಗೆ ಚಿನೂಕ್ ಹೆಲಿಕಾಪ್ಟರ್ ಸೇರ್ಪಡೆ – ವಿಶೇಷತೆ ಏನು ? ವಿಡಿಯೋ ನೋಡಿ
Advertisement
Uttarakhand: Locals protest against China at Niti village near India-Tibet border in Chamoli district. A villager says, "We are pained to hear about the loss of lives of our soldiers in Galwan Valley. We are ready to assist the Indian Army in any situation." pic.twitter.com/8awTuAKXS4
— ANI (@ANI) June 19, 2020
Advertisement
ಬಾಲಾಕೋಟ್ ಏರ್ ಸ್ಟ್ರೈಕ್ ವೇಳೆ ಮುಖ್ಯ ಪಾತ್ರ ವಹಿಸಿದ್ದ ಮಿರಾಜ್ 2000 ಮತ್ತು ಸುಕೊಯೋ ಯುದ್ಧ ವಿಮಾನಗಳು ಲೇಹ್ನಲ್ಲಿ ಲ್ಯಾಂಡ್ ಆಗಿದೆ. ಇದರ ಜೊತೆ ದಾಳಿ ಹೆಲಿಕಾಪ್ಟರ್ಗಳಾದ ಅಪಾಚೆ ಮತ್ತು ಚಿನೂಕ್ ಸಹ ಲೇಹ್ ನೆಲೆಗೆ ಬಂದಿವೆ. ಇದನ್ನೂ ಓದಿ: ವಾಯುಸೇನೆಗೆ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ ಸೇರ್ಪಡೆ – ವಿಶೇಷತೆ ಏನು?
Advertisement
Military chopper and fighter jet activity seen in Leh, Ladakh pic.twitter.com/1OoeEIPgrw
— ANI (@ANI) June 19, 2020
Advertisement
ಶ್ರೀನಗರ, ಅಂಬಾಲ, ಅಂದಪೂರ್, ಹಲ್ವಾರ, ಬರೇಲಿ ವಾಯು ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಒಂದು ವೇಳೆ ಚೀನಾ ಏನಾದರೂ ದಾಳಿ ನಡೆಸಿದರೆ ತಕ್ಕ ತಿರುಗೇಟು ನೀಡಲು ಚೀನಾ ಗಡಿಯುದ್ದಕ್ಕೂ ಸೈನಿಕರ ಜಮಾವಣೆ ಹೆಚ್ಚಾಗಿದೆ. ಶ್ರೀನಗರ ಲೇಹ್ ಹೆದ್ದಾರಿಯಲ್ಲಿ ಕಳೆದ ಎರಡು ದಿನಗಳಿಂದ ಸೇನೆಯ ಓಡಾಟ ಹೆಚ್ಚಾಗಿದೆ.