ಲಡಾಖ್: ಕಳೆದ ಎರಡು ತಿಂಗಳಿನಿಂದ ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿದ್ದ ಉದ್ವಿಗ್ನ ಪರಿಸ್ಥಿತಿ ತಿಳಿಯಾಗುತ್ತಿದೆ. ಪರಿಣಾಮ ಗಡಿ ಪ್ರದೇಶದ ಪರಿಸ್ಥಿತಿಗಳನ್ನು ಅರಿಯಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೇಹ್, ಲಡಾಖ್ ಮತ್ತು ಜಮ್ಮು ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ.
ಲೇಹ್ನಲ್ಲಿ ಪ್ಯಾರಾ ಡ್ರಾಪಿಂಗ್ ಕೌಶಲವನ್ನು ವೀಕ್ಷಿಸಿದ ರಾಜನಾಥ್ ಸಿಂಗ್ ಬಳಿಕ ಪ್ಯಾರಾ ಡ್ರಾಪಿಂಗ್ ಮತ್ತು ಸ್ಕೋಪಿಂಗ್ ಶಸ್ತ್ರಾಸ್ತ್ರಗಳ ಪರಿಶೀಲನೆ ನಡೆಸಿದರು. ‘ಗಡಿಯಲ್ಲಿ ಪರಿಸ್ಥಿತಿ ಪರಿಶೀಲಿಸಲು ಭೇಟಿ ನೀಡಿದ್ದು, ಈ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಯ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Advertisement
Ladakh: Defence Minister Rajnath Singh, Chief of Defence Staff General Bipin Rawat and Army Chief General MM Naravane arrive at Stakna, Leh. They will witness para dropping skills of the Armed Forces here. pic.twitter.com/pJ4Njv1BMY
— ANI (@ANI) July 17, 2020
Advertisement
ಲೇಹ್ನ ಸ್ಟಕ್ನಾದಲ್ಲಿ ಭಾರತೀಯ ಸೇನೆಯ ಟಿ-90 ಟ್ಯಾಂಕ್ಗಳು ಮತ್ತು ಬಿಎಂಪಿ ಕಾಲಾಳು ಪಡೆಯ ಯುದ್ಧ ವಾಹನಗಳು ಈ ಸಂದರ್ಭದಲ್ಲಿ ಸಮರಾಭ್ಯಾಸ ನಡೆಸಿದ್ದು, ರಾಜ್ನಾಥ್ ಸಿಂಗ್, ಬಿಪಿನ್ ರಾವತ್ ಸೇನೆಯ ಸಮರಾಭ್ಯಾಸವನ್ನು ವೀಕ್ಷಿಸಿದರು. ಸಚಿವ ರಾಜನಾಥ್ ಸಿಂಗ್ ಅವರಿಗೆ ಭೇಟಿ ಸಂದರ್ಭದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ಅವರು ಸಾಥ್ ನೀಡಿದ್ದಾರೆ.
Advertisement
#WATCH Ladakh: Troops of Indian Armed Forces carry out para dropping exercise at Stakna, Leh in presence of Defence Minister Rajnath Singh, Chief of Defence Staff General Bipin Rawat and Army Chief General MM Naravane. pic.twitter.com/TX4eVOkeT0
— ANI (@ANI) July 17, 2020
Advertisement
ಇಂದು ಮತ್ತು ನಾಳೆ ಗಡಿ ಪ್ರದೇಶದ ಪರಿಶೀಲನೆ ಬಳಿ ಸೈನ್ಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಚಿವರು ಮಾಹಿತಿ ಪಡೆಯಲಿದ್ದಾರೆ. ಆ ಬಳಿಕ ಶನಿವಾರ ಮಧ್ಯಾಹ್ನ ಶ್ರೀನಗರಕ್ಕೆ ಭೇಟಿ ನೀಡಿ ಅಲ್ಲಿಂದ ಪಾಕಿಸ್ತಾನದ ಗಡಿ ಪ್ರದೇಶಕ್ಕೆ ಪರಿಸ್ಥಿತಿಯನ್ನು ವಿಕ್ಷೀಸಲಿದ್ದಾರೆ. ಬಳಿಕ ದೆಹಲಿಗೆ ವಾಪಸ್ ಆಗಲಿದ್ದಾರೆ. ಉಳಿದಂತೆ ಇದೇ ಜುಲೈ 03 ರಂದು ಪ್ರಧಾನಿ ಮೋದಿ ಲಡಾಖ್ ಭೇಟಿ ನೀಡಿ ಸೈನಿಕರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದರು.
#WATCH Indian Army T-90 tanks and BMP infantry combat vehicles carry out exercise at Stakna, Leh in presence of Defence Minister Rajnath Singh, Chief of Defence Staff General Bipin Rawat and Army Chief General MM Naravane. pic.twitter.com/Psc3CJOWok
— ANI (@ANI) July 17, 2020