– 4 ಸಾವಿರಕ್ಕೂ ಅಧಿಕ ಮಂದಿಗೆ ಗಾಯ
– ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದ್ದು ಏನು?
ಬೈರೂತ್: ಲೆಬನಾನ್ ರಾಜಧಾನಿ ಬೈರೂತ್ನಲ್ಲಿ ನಡೆದ ಭಾರೀ ಸ್ಫೋಟಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇದೂವರೆಗೂ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಹಾಗೂ ಕಾರ್ಯಾಚರಣೆ ಭರದಿಂದ ಸಾಗಿದೆ.
Advertisement
ಈ ಸಂಬಂಧ ಮಾತನಾಡಿದ ಅಲ್ಲಿನ ಪ್ರಧಾನಿ ಹಾಸನ್ ಡಯಾಬ್, ಮಂಗಳವಾರ ಬೈರೂತ್ ಬಂದು ಗೋದಾಮಿನಲ್ಲಿ ಸಂಗ್ರಹವಾಗಿದ್ದ 2,750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡಿದೆ. ಈ ಭಾರೀ ಸ್ಫೋಟದ ಪರಿಣಾಮ ಲೆಬನಾನ್ ರಾಜಧಾನಿ ಹಲವು ಪ್ರದೇಶಗಳು ಧ್ವಂಸವಾಗಿವೆ ಎಂದು ತಿಳಿಸಿದ್ದಾರೆ.
Advertisement
Unreal video of Gemmayze. This is heart wrenching. pic.twitter.com/7qIVBu3LTX
— Beirut.com (@BeirutCityGuide) August 4, 2020
Advertisement
ಘಟನೆ ಬಗ್ಗೆ ಅಧ್ಯಕ್ಷ ಮೈಕೆಲ್ ಮಾತನಾಡಿ, ಕಳೆದ 6 ವರ್ಷಗಳಿಂದ ಯಾವುದೇ ಸುರಕ್ಷಿತ ಕ್ರಮಗಳಿಲ್ಲದೆ 2,750 ಟನ್ ಅಮೋನಿಯಂ ನೈಟ್ರೇಟ್ ಸಂಗ್ರಿಹಿಸಲಾಗುತ್ತಿದೆ. ಇದೇ ಈ ಘಟನೆಗೆ ಕಾರಣವಾಗಿದ್ದು, ಇದು ಕ್ಷಮಾರ್ಹವಲ್ಲ ಎಂದು ಹೇಳಿದ್ದಾರೆ.
Advertisement
ಪ್ರತ್ಯಕ್ಷದರ್ಶಿಯೊಬ್ಬರು ಈ ಬಗ್ಗೆ ಮಾತನಾಡಿ, ನೋಡನೋಡುತ್ತಿದ್ದಂತೆಯೇ ಇಡೀ ಕತ್ತಲಾವರಿಸಿದ್ದು, ನಮ್ಮ ಸುತ್ತಮುತ್ತಲಿದ್ದ ಕಟ್ಟಡಗಳು ಧರೆಗುರುಳಿದವು ಎಂದಿದ್ದಾರೆ. ಇನ್ನೊಬ್ಬರು ಘಟನೆ ಬಗ್ಗೆ ವಿವರಿಸುತ್ತಾ, ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಭಾರೀ ಸ್ಫೋಟ ಸಂಭವಿಸುತ್ತದೆ ಎಂದು ಅಂದುಕೊಂಡಿರಲಿಲ್ಲ. ಹೀಗಾಗಿ ನಾವು ಒಳಗೆ ಹೊಗಿದ್ದು, ಕೂಡಲೆ ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಪರಿಣಾಮ ಕೆಲ ಕಾಲ ನನ್ನ ಕಿವಿಗಳು ಬಂದ್ ಆಗಿದ್ದು, ಭಯ ಆವರಿಸಿತು ಎಂದರು.
Apocalyptic scenes from Beirut earlier today. pic.twitter.com/GXuFMco2Hw
— Beirut.com (@BeirutCityGuide) August 4, 2020
ಆ ಬಳಿಕ ಇದ್ದಕ್ಕಿದ್ದಂತೆ ಕಟ್ಟಡಗಳ ಗಾಜುಗಳು ಚೂರುಚೂರಾಗಿ ಬಿದ್ದವು. ಘಟನೆ ಸಂಭವಿಸುತ್ತಿದ್ದಂತೆಯೇ ಬೈರುತ್ನಾದ್ಯಂತ ಜನ ಪರಸ್ಪರ ಕರೆ ಮಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು ಎಂದು ವಿವರಿಸಿದರು. ಸದ್ಯ ಸ್ಪೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
Completely surreal. Our heart aches for Lebanon tonight???? pic.twitter.com/nWDJbXZEvY
— Beirut.com (@BeirutCityGuide) August 4, 2020