ಸತತ ಎರಡು ತಿಂಗಳಿಂದ ನಟಿ ಲೀಲಾವತಿ (Leelavati) ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ವಿಕಾಸ್ (Dr.Vikas), ನಟಿಗೆ ಚಿಕಿತ್ಸೆ ನೀಡಿದ ವಿವರವನ್ನು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಲೀಲಾವತಿ ಅವರಿಗೆ ಏನೆಲ್ಲ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನುವ ವಿವರವನ್ನೂ ಅವರು ನೀಡಿದ್ದಾರೆ.
Advertisement
ಸತತ ಎರಡು ತಿಂಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಎರಡು ವಾರದ ಹಿಂದೆಯಷ್ಟೇ ನಾನು ಅವರ ಮನೆಗೆ ಹೋಗಿದ್ದೆ. ಮಲಗಿದ್ದಲ್ಲೇ ಮಲಗಿದ್ದರಿಂದ ಬೆನ್ನಿನಲ್ಲಿ ನೋವಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸೋದು ಕಷ್ಟವಾಗಿಲ್ಲ. ಮನೆಯಲ್ಲೇ ಟ್ರೀಟ್ ಮೆಂಟ್ ಕೊಡಲು ಮುಂದಾದೆವು ಎಂದರು ಡಾ.ವಿಕಾಸ್.
Advertisement
Advertisement
ಮುಂದುವರೆದು ಮಾತನಾಡಿದ ಡಾ.ವಿಕಾಸ್, ‘ಲೀಲಾವತಿ ಅವರ ದೇಹದಲ್ಲಿ ಪ್ರೊಟಿನ್ ಕಡಿಮೆ ಇತ್ತು. ಉಪ್ಪಿನಾಂಶ ಕೂಡ ತೀರಾ ಕಡಿಮೆ ಆಗಿತ್ತು. ಹೊಟ್ಟೆಗೆ ಡೈರೆಕ್ಟ್ ಆಗಿ ಅವರಿಗೆ ಆಹಾರವನ್ನು ಕೊಡುವಂತಹ ವ್ಯವಸ್ಥೆ ಮಾಡಲಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ವಯಸ್ಸಿನ ಕಾರಣದಿಂದಾಗಿ ಅವರ ದೇಹ ಚಿಕಿತ್ಸೆಗೆ ಬೇಗ ಬೇಗ ಸ್ಪಂದಿಸುತ್ತಿರಲಿಲ್ಲ ಎಂದಿದ್ದಾರೆ.
Advertisement
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರನ್ನು ಇಂದು ನೆಲಮಂಗಲದ (Nelamangala) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಲೀಲಾವತಿ ಅವರು ನಿಧನರಾಗಿದ್ದಾರೆ (Passed away). ಅವರ ಅಂತಿಮ ದರ್ಶನಕ್ಕೆ ನಾಳೆ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.