ಕೋಲಾರ: ಅಂತರಾಷ್ಟ್ರೀಯ ಮಟ್ಟದಲ್ಲಿ ಹೆರುವಾಸಿಯಾದ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಮೂರನೇ ದೊಡ್ಡ ಉದ್ಯಾನವನ ಮಾಡುವ ಚಿಂತನೆ ನಡೆಯುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
Advertisement
75ನೇ ಸ್ವತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರು ಕಟ್ಟಿದ ಕೆಂಪುತೋಟ 34 ಎಕರೆ ಮತ್ತು ಅದರ ಜೊತೆಗೆ 240 ಎಕರೆ ಲಾಲ್ ಬಾಗ್ ಮತ್ತು ಕಬ್ಬನ್ ಉದ್ಯಾನವನ ಬಿಟ್ಟರೆ ಇದುವರೆಗೂ ಬಹುದೊಡ್ಡ ಉದ್ಯಾನವನ ನಿರ್ಮಾಣವಾಗಿಲ್ಲ. ಸುಮಾರು 300 ರಿಂದ 400 ವರ್ಷಗಳಿಂದ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ನಂತರ ಯಾವುದೇ ಮೂರನೇ ಉದ್ಯಾನವನ ಮಾಡುವ ಚಿಂತನೆ ಮಾಡಿಲ್ಲ. ಇವೆರೆಡು ಉದ್ಯಾನವನವನ್ನು ಬಿಟ್ಟರೆ ಅದಕ್ಕಿಂತ ದೊಡ್ಡ ಉದ್ಯಾನವನವನ್ನು ನಿರ್ಮಾಣ ಮಾಡುವ ಚಿಂತನೆ ನಮ್ಮ ಸರ್ಕಾರದಲ್ಲಿ ನಡೆಯುತ್ತಿದೆ. ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವಂತೆ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ತಿಳಿಸಿದರು.
Advertisement
Advertisement
ಪ್ರಪಂಚದಲ್ಲಿ ಯಾವುದೇ ದೇಶಕ್ಕೆ ಹೋದ್ರು ಭಾರತ, ಕರ್ನಾಟಕ ಅನ್ನೋದಿಲ್ಲ, ಬೆಂಗಳೂರು ಸಿಲಿಕಾನ್ ಸಿಟಿ ಅಂತ ತನ್ನದೇ ಹೆಸರು ಹೊಂದಿದೆ. ಹಾಗಾಗಿ ಮೂರನೇ ಅತಿ ದೊಡ್ಡ ಉದ್ಯಾನವನ ಮಾಡಬೇಕಾಗಿರೋದು ನಮ್ಮ ಗುರಿಯಾಗಿದೆ. ಕೋಲಾರ ಜಿಲ್ಲೆಯ ಅಭಿವೃದ್ದಿ ನನ್ನ ಮೊದಲ ಧ್ಯೇಯ. ಹಂತ ಹಂತವಾಗಿ ಜಿಲ್ಲೆಯಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಮಂಗಳೂರು ಏರ್ ಪೋರ್ಟ್ ರ್ಯಾಪಿಡ್ ಪಿಸಿಆರ್ ಟೆಸ್ಟ್ – ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ದ.ಕ. ಡಿಸಿ
Advertisement
ಕೋಲಾರ ಜಿಲ್ಲಾ ಕೇಂದ್ರದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಭಾರತ ಮಾತೆಗೆ ಗೌರವ ಸಲ್ಲಿಸಲಾಯಿತು. #IndependenceDay2021 #flaghoisting #Kolar #Munirathna pic.twitter.com/VK14oYCeyZ
— Munirathna (@MunirathnaMLA) August 15, 2021
ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ, ಶಾಸಕ ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಗೊವಿಂದರಾಜು, ಜಿಲ್ಲಾಧಿಕಾರಿ ಡಾ. ಅರ್. ಸೆಲ್ವಮಣಿ, ಜಿಲ್ಲಾ ವರಿಷ್ಠಾಧಿಕಾರಿ ಕಿಶೋಬಾಬು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ರು. ಇದನ್ನೂ ಓದಿ: ಮನಸ್ಸಿನಲ್ಲಿ ಸ್ವಾತಂತ್ರ್ಯವಿರಲಿ, ಪದಗಳಲ್ಲಿ ನಂಬಿಕೆಯಿರಲಿ: ಯಶ್