ಚಿಕ್ಕೋಡಿ: ಕೊರೊನಾ ಲಾಕ್ಡೌನ್ ಘೋಷಣೆ ಆದಾಗಿನಿಂದಲೂ ಲಾಕ್ಡೌನ್ ಜಾರಿ ಮಾಡಲು ಹಗಲಿರಳು ಶ್ರಮಿಸಿದ ಪೊಲೀಸರು ಲಾಕ್ಡೌನ್ ಸಡಿಲಿಕೆಯ ನಂತರ ರಿಲ್ಯಾಕ್ಸ್ ಆಗುತ್ತಿದ್ದಾರೆ.
ಕೆಲ ಪೊಲೀಸರು ಲಾಕ್ಡೌನ್ ಸಡಿಲಿಕೆ ನಂತರ ತಮ್ಮ ಕುಟುಂಬಗಳೊಂದಿಗೆ ಕಾಲ ಕಳೆಯುತ್ತಿದ್ದರೆ, ಕೆಲವರು ಆಟ ಆಡಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ ಗುಡಗನಟ್ಟಿ ಅವರು ಹಾರ್ಮೋನಿಯಂ ನುಡಿಸಿ ತಮ್ಮ ಆಯಾಸವನ್ನು ಕಳೆಯುತ್ತಿದ್ದಾರೆ.
Advertisement
Advertisement
ಕೊರೊನಾ ಲಾಕ್ಡೌನ್ ಜವಾಬ್ದಾರಿ ಸೇರಿದಂತೆ ಹುಕ್ಕೇರಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಷ್ಟೇ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿರುವ ಪಿಎಸ್ಐ ಶಿವಾನಂದ ಗುಡಗನಟ್ಟಿ ಅವರು, ಇಷ್ಟೆಲ್ಲ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಈ ನಡುವೆ ತಮ್ಮ ಬಿಡುವಿನ ವೇಳೆಯಲ್ಲಿ ದೈನಂದಿನ ಜಂಜಾಟಗಳನ್ನು ಮರೆತು ಅದ್ಭುತವಾಗಿ ಹಾರ್ಮೋನಿಯಂ ನುಡಿಸುತ್ತಾರೆ.
Advertisement
ಹಾರ್ಮೋನಿಯಂ ನುಡಿಸುವುದನ್ನು ಯಾವುದೇ ಗುರು ಇಲ್ಲದೇ ಯುಟ್ಯೂಬ್ ನೋಡಿ ನುಡಿಸಲು ಕಲಿತಿದ್ದಾರೆ. ಲಾಕ್ಡೌನ್ ಸಡಿಲಿಕೆ ಆದ ನಂತರವೂ ಇವರ ತಮ್ಮ ಕರ್ತವ್ಯ ಮುಗಿಸಿ ಬಂದ ಹಾರ್ಮೋನಿಯಂ ನುಡಿಸಿ ತಮ್ಮ ಆಯಾಸ ಕಳೆಯುತ್ತಿದ್ದರು. ಲಾಕ್ಡೌನ್ ಜಾರಿ ಇದ್ದ ಸಂದರ್ಭದಲ್ಲಿ ತಮ್ಮ 2 ವರ್ಷದ ಮಗಳು ಆಸ್ಪತ್ರೆಯಲ್ಲಿ ಇದ್ದರು, ಪತ್ನಿಯನ್ನು ಮಾತ್ರ ಆಸ್ಪತ್ರೆಯಲ್ಲಿ ಬಿಟ್ಟು ಶಿವಾನಂದ ಗುಡಗನಟ್ಟಿ ಲಾಕ್ಡೌನ್ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಕಾರಣವಾಗಿದ್ದರು.